Thursday, June 30, 2022
spot_imgspot_img
spot_imgspot_img

ಮಂಜೇಶ್ವರ: ಮನೆ ಕಾಂಪೌಂಡ್ ಗೆ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವು

- Advertisement -
- Advertisement -

ಕಾಸರಗೋಡು: ಸ್ಕೂಟರ್ ಮನೆಯ ಆವರಣ ಗೋಡೆಗೆ ಬಡಿದು ಸವಾರ ಮೃತಪಟ್ಟ ಘಟನೆ ಗುರುವಾರ ಬಂಗ್ರ ಮಂಜೇಶ್ವರ ಬಳಿ ನಡೆದಿದೆ.

ಹೊಸಂಗಡಿ ರೈಲ್ವೆ ಗೇಟ್ ಸಮೀಪದ ದೀಕ್ಷಿತ್ (30) ಮೃತಪಟ್ಟವರು. ಬಂಗ್ರ ಮಂಜೇಶ್ವರ ಕಟ್ಟೆ ಬಜಾರ್ ನಲ್ಲಿ ಅಪಘಾತ ನಡೆದಿದೆ. ಬೆಳಿಗ್ಗೆ ಈ ದಾರಿಯಾಗಿ ತೆರಳುತ್ತಿದ್ದ ಮೀನುಗಾರರ ಗಮನಕ್ಕೆ ಬಂದಿದ್ದು, ಸ್ಕೂಟರ್ ಅಪಘಾತ ಕ್ಕೀಡಾಗಿರುವು ಕಂಡು ಬಂದಿದೆ. ಬಳಿಕ ಗಮನಿಸಿದಾಗ ದೀಕ್ಷಿತ್ ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ .

ಕೂಡಲೇ ಮಂಜೇಶ್ವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹದ ಮಹಜರು ನಡೆಸಿ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಗೆ ಸಾಗಿಸಿದರು. ದೀಕ್ಷಿತ್ ಮಂಗಳೂರಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದು , ಬುಧವಾರ ರಾತ್ರಿ ಮರಳುತ್ತಿದ್ದಾಗ ಅಪಘಾತ ನಡೆದಿರಬಹುದು ಎಂದು ಶಂಕಿಸಲಾಗಿದ. ದೀಕ್ಷಿತ್ ತಂದೆ ದಿನೇಶ್ ಕುಮಾರ್ ಹೊಸಂಗಡಿಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದಾರೆ. ಮಂಜೇಶ್ವರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!