Friday, August 19, 2022
spot_imgspot_img
spot_imgspot_img

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿತ; ಸಂಚಾರಕ್ಕೆ ಅಡ್ಡಿ

- Advertisement -G L Acharya G L Acharya
- Advertisement -

ಕೊಡಗು: ಧಾರಾಕಾರ ಮಳೆಯಿಂದ ಭೂ ಕುಸಿತ ಉಂಟಾದ ಪರಿಣಾಮ ರಸ್ತೆಯಲ್ಲೇ ಮಣ್ಣು ಬಿದ್ದು ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವಿನ ರಸ್ತೆಗೆ ಮಣ್ಣು ಮತ್ತು ಮರಗಳು ಕುಸಿದು ಬಿದ್ದಿವೆ. ರಸ್ತೆಯಲ್ಲಿ ಭಾರೀ ಮಣ್ಣು ಬಿದ್ದಿದ್ದು, ಚರಂಡಿಗೆ ಮಣ್ಣು ಬಿದ್ದು ಚರಂಡಿ ನೀರು ಕೂಡಾ ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸವಾರರಿಗೆ ಸಂಚರಿಸಲಾಗದೆ ಸಂಕಟ ಎದುರಾಗಿದೆ. ಇದರೊಂದಿಗೆ ದಟ್ಟ ಮಂಜು ಕೂಡಾ ಈ ಭಾಗದಲ್ಲಿ ಆವರಿಸಿರುವುದರಿಂದ ದಾರಿಯೂ ಸರಿಯಾಗಿ ಕಾಣದೆ ಹೈರಾಣಾಗಿದ್ದಾರೆ. ಇದರಿಂದ ನಡೆದಾಡಲು ಕೂಡಾ ಪಾದಚಾರಿಗಳಿಗೆ ಕಷ್ಟವಾಗುತ್ತಿದೆ.

vtv vitla
- Advertisement -

Related news

error: Content is protected !!