ಪುತ್ತೂರು: ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣವನ್ನು ಗುರುತಿಸಲು ದಿಗ್ವಿಜಯ್ ದಿವಸ್ ಅನ್ನು ವಾರ್ಷಿಕವಾಗಿ ಸೆಪ್ಟೆಂಬರ್ 11 ರಂದು ಆಚರಿಸಲಾಗುತ್ತದೆ .
ಈ ದಿನ ದಿಗ್ವಿಜಯ್ ದಿವಸವಾಗಿ ಆಚರಿಸುತ್ತಿದ್ದು ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯ ವಿವೇಕ ವಿಜಯ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 131 ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಪಥ ದರ್ಶನದಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಿದ್ದರು. ನಂತರ ಮಧ್ಯಾಹ್ನದ ಭೋಜನಕ್ಕೆ ವಿಶೇಷವಾಗಿ ತುಳುನಾಡಿನ ಆರಾಧನೆಯ ಭಾಗವಾದ ದೈವರಾಧನೆಯಲ್ಲಿ ಪ್ರಮುಖವಾಗಿರುವವರು ದೈವ ನರ್ತಕರು. ಇವರಲ್ಲಿ ಹೆಸರಾಂತ ದೈವ ನರ್ತಕಾರದ ಹೊನ್ನಪ್ಪ ಕಲ್ಲೇಗ ಇವರ ಮನೆಯಲ್ಲಿ ಸಾಮರಸ್ಯದ ಭೋಜನ ಸವಿದರು.
ಈ ಸಂಧರ್ಭದಲ್ಲಿ ಪ್ರಾಂತ ಸಾಮರಸ್ಯ ವೇದಿಕೆಯ ಸಂಯೋಜಕ ದಕ್ಷ ರವೀಂದ್ರ, ದೈವ ನರ್ತಕರಾದ ವಸಂತ ಕಲ್ಲೇಗ,ಹೊನ್ನಪ್ಪ ಕಲ್ಲೇಗ, ರಮೇಶ ಕಲ್ಲೇಗ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮನ್ಮಥ ಶೆಟ್ಟಿ ಪುತ್ತೂರು, ಶಶಾಂಕ್ ನೆಲ್ಲಿತ್ತಾಯ,ವಿಧ್ಯಾ ಭಾರತಿ ಪ್ರಾಂತ ಪ್ರಮುಖ್ ರಘರಾಜ್ ಉಬರಡ್ಕ, ಕಬಕ ಗ್ರಾಮ ಪಂಚಾಯತ್ ಸದಸ್ಯ ವಿನಯ್ ಕಲ್ಲೇಗ, ಜಯಂತ ಸಪಲ್ಯ ಶೇವಿರೆ, ರೂಪೇಶ್ ಕುಲಾಲ್, ಕೃಷ್ಣ ಶೇವಿರೆ, ಉಮೇಶ್ ಆಚಾರ್ಯ, ದಿವಾಕರ ಪೂಜಾರಿ, ವಾಸು ಕಲ್ಲೇಗ, ಅರುಣ್ ಕಲ್ಲೇಗ, ಸಚಿನ್ ಶೆಣೈ, ರಾಮ್ ಭಟ್, ಶೋಭ ಹೊನ್ನಪ್ಪ, ಯೋಗಿನಿ ರಮೇಶ್, ಜಾನಕಿ ವಸಂತ್ ಉಪಸ್ಥಿತರಿದ್ದರು.