Sunday, June 29, 2025
spot_imgspot_img
spot_imgspot_img

ಮನೆಗೆ ಹತ್ತಿಕೊಂಡ ಬೆಂಕಿ 8 ತಿಂಗಳ ಮಗು ಸಹಿತ 5 ಮಂದಿ ಸಾವು.!

- Advertisement -
- Advertisement -

ಕೇರಳ : ಮನೆಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ಒಂದೇ ಕುಟುಂಬ ಐವರು ಸಾವನಪ್ಪಿರುವ ಘಟನೆ ಕೇರಳದ ವರ್ಕಲಾದಲ್ಲಿ ನಡೆದಿದ್ದು, ಈ ಘಟನೆಯಲ್ಲಿ 8 ತಿಂಗಳ ಮಗು ಕೂಡ ಸಾವನಪ್ಪಿದೆ.

ಮೃತರನ್ನು ಪ್ರತಾಪನ್(62), ಶೆರ್ಲಿ(53), ಅಭಿರಾಮಿ(25), ಅಖಿಲ್(29) ಹಾಗೂ ರಿಯಾನ್(8ತಿಂಗಳು) ಎಂದು ಗುರುತಿಸಲಾಗಿದೆ. ವರ್ಕಳದಲ್ಲಿ ಪ್ರತಾಪನ್ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ತಡರಾತ್ರಿ ಈ ದುರ್ಘಟನೆ ನಡೆದಿದೆ.

ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ನೆರೆಹೊರೆಯವರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತೀವ್ರ ಗಾಯಗೊಂಡಿದ್ದ ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಇವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಅನಾಹುತದಲ್ಲಿ ಕನಿಷ್ಠ 5 ದ್ವಿಚಕ್ರ ವಾಹನಗಳು ಧ್ವಂಸಗೊಂಡಿದೆ. ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎನ್ನುವ ಬಗ್ಗೆ ಸದ್ಯಕ್ಕೆ ಇನ್ನೂ ತಿಳಿದಿಲ್ಲ.

- Advertisement -

Related news

error: Content is protected !!