- Advertisement -
- Advertisement -
ಕಾಸರಗೋಡು: ಕಳೆದ ಒಂದು ವಾರದಿಂದ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಅ.3ರಿಂದ ಅ.31ರ ತನಕ ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಕೇರಳದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ ದಿನಂಪ್ರತಿ ಎಂಟು ಸಾವಿರವನ್ನು ದಾಟುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲೂ 500ರ ಗಡಿಗೆ ತಲುಪಿದೆ. ಕಳೆದ 20 ದಿನಗಳಿಂದ ಅನಿಯಂತ್ರಿತವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಲಾಕ್ ಡೌನ್ ಸಡಿಲಿಕೆಯನ್ನು ಮತ್ತೆ ಬಿಗಿ ಗೊಳಿಸಲು ಕೇರಳ ಸರಕಾರ ಈಗಾಗಲೇ ತೀರ್ಮಾ ನಿಸಿದೆ. ನಿಷೇಧಾಜ್ಞೆಯನ್ವಯ ಐದಕ್ಕಿಂತ ಅಧಿಕ ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.


- Advertisement -








