Friday, August 19, 2022
spot_imgspot_img
spot_imgspot_img

ಮಲ್ಪೆ: ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿ ನಾಪತ್ತೆ

- Advertisement -G L Acharya G L Acharya
- Advertisement -

ಮಲ್ಪೆ: ಕಾಲೇಜಿಗೆಂದು ತೆರಳಿದ್ದ ವಿದ್ಯಾರ್ಥಿ ನಾಪತ್ತೆಯಾದ ಘಟನೆ ತೆಂಕನಿಡಿಯೂರುವಿನನಲ್ಲಿ ನಡೆದಿದೆ.

ತೆಂಕನಿಡಿಯೂರುವಿನ ಲಕ್ಷ್ಮೀನಗರ ನಿವಾಸಿ ಶರ್ಮಿಳಾ ಎಂಬವರ ಮಗ 17 ವರ್ಷದ ಸೃಜನ್ ಎಂಬಾತ ಆ.4 ರಂದು ಮನೆಯಿಂದ ಹೋದವ ವಾಪಸ್‌ ಬಾರದೆ ನಾಪತ್ತೆಯಾಗಿದ್ದಾನೆ.

ಸೃಜನ್ ಉಡುಪಿಯ ಟ್ಯುಟೋರಿಯಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಈತ ಈ ಹಿಂದೆ ಎರಡು ಬಾರಿ ಮನೆ ಬಿಟ್ಟು ಹೋದವನು ಮರುದಿನ ವಾಪಸ್ಸು ಬಂದಿರುತ್ತಾನೆ. ಆದರೆ ಆ. 4 ರಂದು ಬೆಳಿಗ್ಗೆ ಹೋದವನು ಈವರೆಗೂ ಮನೆಗೆ ವಾಪಸ್ಸು ಬಂದಿರುವುದಿಲ್ಲ. ಈತನ ಬಗ್ಗೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.

ಸೃಜನ್ ಮನೆಯಿಂದ ಹೋಗುವಾಗ ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಂದು ಬಣ್ಣದ ಹೂ ಗಳಿರುವ ಉದ್ದತೋಳಿನ ಶರ್ಟ್ ಧರಿಸಿರುತ್ತಾನೆ ಎಂಬುದಾಗಿ ಶರ್ಮಿಳಾ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!