Friday, July 4, 2025
spot_imgspot_img
spot_imgspot_img

ಮಾಣಿ: ಮಾರ್ಚ್ 26, 27 ರಂದು ಸೂರಿಕುಮೇರು ಬದ್ರಿಯಾ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ ಮತ್ತು ಧಾರ್ಮಿಕ ಪ್ರವಚನ

- Advertisement -
- Advertisement -

ಮಾಣಿ : ಬದ್ರಿಯಾ ಜುಮ್ಮಾ ಮಸೀದಿ ಸೂರಿಕುಮೇರು ಇದರ 24 ನೇ ಸ್ವಲಾತ್ ವಾರ್ಷಿಕ ಮತ್ತು ಎರಡು ದಿನಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಮಾರ್ಚ್ 26, 27 ಇದೇ ಶನಿವಾರ ಮತ್ತು ಆದಿತ್ಯವಾರ ನಡೆಯಲಿದೆ.

ಶನಿವಾರ ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಭಾಷಣ, ಆದಿತ್ಯವಾರ ಅಬೂಬಕರ್ ಸಿದ್ದೀಕ್ ಜಲಾಲಿ ಮುಖ್ಯ ಪ್ರಭಾಷಣ ಮಾಡುವರು. ಸ್ವಲಾತ್ ವಾರ್ಷಿಕದ ನೇತೃತ್ವವನ್ನು ಸಯ್ಯಿದ್ ಶರಫುದ್ದೀನ್ ಅಲ್ ಹಾದಿ ತಂಙಳ್ ಪುತ್ತೂರು ವಹಿಸುವರು, ಕಾರ್ಯಕ್ರಮವು ಮಗ್ರಿಬ್ ನಮಾಝ್ ಬಳಿಕ ಆರಂಭವಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!