Thursday, June 30, 2022
spot_imgspot_img
spot_imgspot_img

ಮಾಸ್ಟರ್ ಶೆಫ್‌ ಕಾರ್ಯಕ್ರಮದಲ್ಲಿ ಭೇಲ್‌ ಪುರಿ ತಿಂದು ಚಪ್ಪರಿಸಿದ ತೀರ್ಪುಗಾರರು..!

- Advertisement -
- Advertisement -

ಪಾನಿಪುರಿ, ಭೇಲ್​ಪುರಿ, ಮಸಾಲಾಪುರಿ, ಈ ಚಾಟ್​ಗಳ ಒಂದೊಂದು ಹೆಸರು ಕೇಳ್ತಿದ್ರೆನೆ ಬಾಯಲ್ಲಿ ನೀರು ಬಂದು ಬಿಡುತ್ತೆ. ಸಂಜೆ ಆದ್ರೆ ಸಾಕು ಚಾಟ್ ಅಂಗಡಿಗಳ ಮುಂದೆ ಜನ ಸಾಲು ಸಾಲಾಗಿ ನಿಂತು ಬಾಯಿ ಚಪ್ಪರಿಸಿಕೊಂಡು ತಿನ್ತಾ ಇರ್ತಾರೆ. ಈಗ ಇದೇ ಚಾಟ್​ಗಳಲ್ಲಿ ಒಂದಾದ ಭೇಲ್​ಪುರಿ ವಿದೇಶದಲ್ಲೂ ಫುಲ್ ಫೇಮಸ್ ಆಗಿದೆ.

ಆಸ್ಟ್ರೇಲಿಯಾದ ಫೇಮಸ್ ಅಡುಗೆ ಕಾರ್ಯಕ್ರಮವಾದ ಮಾಸ್ಟರ್ ಶೆಫ್‌ನಲ್ಲಿ ಈ ಭೇಲ್‌ಪುರಿ ರಾರಾಜಿಸಿದೆ. ಸಾರಾ ಟೋಡ್ ಅನ್ನುವ ಸ್ಪರ್ಧಿ ಟೇಸ್ಟಿ ಹಾಗೂ ತುಂಬಾ ಸುಲಭವಾಗಿ ತಯಾರಿಸುವಂತ ಭೇಲ್​ಪುರಿಯನ್ನ ತಯಾರಿಸಿದ್ಧಾರೆ. ಅಲ್ಲಿನ ತೀರ್ಪುಗಾರರಿಗೆ ಟೇಸ್ಟ್ ನೋಡುವುದಕ್ಕೆ ಕೊಟ್ಟಿದ್ದಾರೆ. ಒಂದೆರಡು ಸ್ಪೂನ್ ಭೇಲ್​ಪುರಿ ತಿಂದಿದ್ದೇ ತಿಂದಿದ್ದು, ಅಲ್ಲಿನ ಜಡ್ಜಸ್ ಫುಲ್ ಖುಷ್ ಆಗಿ ಹೋಗಿದ್ದಾರೆ. ಈಗ ಈ ಸ್ಪೆಷಲ್ ಚಾಟ್​ ಭೇಲ್​ಪುರಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ

ಆಸ್ಟ್ರೇಲಿಯಾದಲ್ಲಿ ಪ್ರಸಾರವಾಗುತ್ತಿರೋ ಮಾಸ್ಟರ್ ಶೆಫ್ 16ನೇ ಸರಣಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಸ್ಪರ್ಧಿ ಹಾಗೂ ಸೆಲೆಬ್ರಿಟಿ ಶೆಫ್ ಸಾರಾ ಇವರಿಬ್ಬರು ಸೇರಿ ಈ ಸ್ವಾದಿಷ್ಟ ಭೇಲ್​ಪುರಿಯನ್ನ ತಯಾರಿಸಿದ್ದರು. ಸಾರಾ ಅವರು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಈ ವಿಷಯವನ್ನ ಹಂಚಿಕೊಂಡಿದ್ದಾರೆ. 10 ನಿಮಿಷ ಸ್ವಾದಿಷ್ಟ ವ್ಯಂಜನ ತಯಾರಿಸುವ ಸವಾಲು ಕೊಟ್ಟಾಗ ನನ್ನ ತಲೆಯಲ್ಲಿ ಮೊದಲಿಗೆ ಬಂದಿದ್ದೇ ಈ ಭೇಲ್ಪುರಿ. ಅಂತ ತಾವು ಇನ್ಸ್ಟಾಗ್ರಾಮ್ ಹಾಕಿಕೊಂಡಿರೋ ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.

- Advertisement -

Related news

error: Content is protected !!