Wednesday, October 7, 2026
spot_imgspot_img
spot_imgspot_img

ಮುಡಿಪು: ಮಹಿಳಾ ದೌರ್ಜನ್ಯ ತಡೆಗೆ ಹೆಚ್ಚಿನ ಒತ್ತು

- Advertisement -
- Advertisement -

ನರಿಂಗಾನ: ಜನ ಶಿಕ್ಷಣ ಟ್ರಸ್ಟ್, ನರಿಂಗಾನ ಗ್ರಾಮ ಪಂಚಾಯಿತಿ, ಸುಗ್ರಾಮ ಗ್ರಾಪಂ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟ,ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ವೇದಿಕೆ ಸಭೆ ಕೊರೋನಾ ತಡೆ ಜಾಗೃತಿ ಲಸಿಕಾ ಅಭಿಯಾನ ಮಾಹಿತಿ ಕಾರ್ಯಕ್ರಮ ನಡೆಯಿತು.

ನರಿಂಗಾನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಾಗೃತಿ ವೇದಿಕೆ ಸಭೆಯಲ್ಲಿ ಮಹಿಳೆಯರ ರಕ್ಷಣೆ ದೌರ್ಜನ್ಯ ತಡೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ತಿಳಿಸಿದರು.

ನರೇಗದಡಿ ಎರೆಹುಳು ತೊಟ್ಟಿ ರಚನೆ ಸೋಕ್ ಪಿಟ್ ರಚನೆ, ಬಸಿಗಾಲುವೆ ನಿರ್ಮಾಣ ತೋಟಗಾರಿಕಾ ಬೆಳೆಗಳಿಗೆ ನರೇಗದಡಿ ಅವಕಾಶಗಳ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾಹಿತಿ ನೀಡಿದರು. ಕೊರೋನಾ ತಡೆ ಜಾಗೃತಿ ತ್ಯಾಜ್ಯಮುಕ್ತ ಮನೆ ತ್ಯಾಜ್ಯ ಮುಕ್ತ ಗ್ರಾಮ ಮಹಿಳಾ ಸಾಂತ್ವನ ಕೇಂದ್ರದ ಸೇವೆಗಳು ವಿಷಯಗಳ ಬಗ್ಗೆ ಜನ ಶಿಕ್ಷಣ ಟ್ರಸ್ಟ್ ನ ಸಂಯೋಜಕರಾದ ಚೇತನ್ ಸಭೆಯಲ್ಲಿ ಮಾಹಿತಿ ನೀಡಿ ಚರ್ಚೆ ನಡೆಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜ್ಯೋತಿ ಡಿಸೋಜಾ, ಶಾಂತಿ ಡಿಸೋಜಾ ಮಲ್ಲಿಕಾ ಗಟ್ಟಿ, ಗಿರಿಜಾ, ಸಾಬಿರಾ ಸೇರಿದಂತೆ ಮಾಜಿ ಸದಸ್ಯರಾದ ಸುಜಾತ ಮತ್ತು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೇವತಿ ನರಿಂಗಾನ ಉಪಸ್ಥಿತರಿದ್ದರು.

- Advertisement -

Related news

error: Content is protected !!