Wednesday, June 24, 2026
spot_imgspot_img
spot_imgspot_img

ಮುರುಳ್ಯ: ಯುವತಿಯೊಂದಿಗೆ ಅಸಭ್ಯ ವರ್ತನೆ; ಆರೋಪಿ ನವಾಝ್ ಪೋಲಿಸ್ ವಶಕ್ಕೆ

- Advertisement -
- Advertisement -

ಮುರುಳ್ಯ ಗ್ರಾಮದ ಅಲೆಕ್ಕಾಡಿಯಲ್ಲಿ ಯುವತಿಯೊಬ್ಬಳು ಯುವಕನೋರ್ವ ಅಸಹ್ಯವಾಗಿ ವರ್ತಿಸಿದ್ದಾನೆಂದು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ನವಾಜ್ ಎಂಬ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.

ಅಲೆಕ್ಕಾಡಿಯಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದ ಕಲ್ಮಡ್ಕದ ಕಜೆ ನವಾಜ್ (29) ಎಂಬಾತ ಅದೇ ಕಟ್ಟಡದಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿರುವ ತಾಯಿಯೊಂದಿಗೆ ವಾಸವಿರುವ ಯುವತಿಗೆ ಕೈಸನ್ನೆ ಮಾಡುವುದು ಬಟ್ಟೆ ಕಳಚುವುದು ಮತ್ತು ಬಟ್ಟೆ ಒಗೆಯುವಾಗ ಇಣುಕಿ ನೋಡುವುದು ಈ ರೀತಿಯಾಗಿ ಅಸಭ್ಯವಾಗಿ ವರ್ತಿಸುವುದೆಂದು ಯುವತಿ ದೂರು ನೀಡಿದ್ದಳು.

- Advertisement -

Related news

error: Content is protected !!