- Advertisement -
- Advertisement -


ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದಲ್ಲಿ ತಂದೆ ಮಗ ಸಾವಿನಲ್ಲಿ ಒಂದಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಗ್ರಾಮದ 58 ವರ್ಷದ ಅಮೀನ್ ಸಾಬ್ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ತಂದೆಯ ಸಾವಿನ ಸುದ್ದಿಯ ಅಘಾತ ತಡೆಯಲಾರದೇ ಲೋ ಬಿಪಿಯಿಂದ ಕಿರಿಯ ಮಗ ಕೂಡ ಸಾವನ್ನಪ್ಪಿದ್ದಾನೆ.
ತಂದೆಯ ಸಾವಿನ ಸುದ್ದಿ ತಿಳಿದ ಎರಡ್ಮೂರು ಗಂಟೆಯಲ್ಲೇ 37 ವರ್ಷದ ಮಗ ಮೆಹಬೂಬ್ ದಾದಾಪೀರ್ ಮೃತಪಟ್ಟಿದ್ದಾನೆ. ಮೃತ ದಾದಾಪೀರ್ಗೆ ಕಳೆದ 8 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಈ ಘಟನೆಯಿಂದ ತಿಪ್ಪನಹಟ್ಟಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ತಂದೆ ಮತ್ತು ಮಗನನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದ್ದು, ದುಃಖದಲ್ಲಿ ಮುಳುಗಿದೆ
- Advertisement -








