Friday, August 19, 2022
spot_imgspot_img
spot_imgspot_img

ಮುಲ್ಕಿ: ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ; ಓರ್ವ ಆಸ್ಪತ್ರೆಗೆ ದಾಖಲು

- Advertisement -G L Acharya G L Acharya
- Advertisement -

ಮುಲ್ಕಿ: ಇಲ್ಲಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ಸಂಭವಿಸಿದ್ದು ಓರ್ವ ಗಾಯಗೊಂಡು ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಗೊಂಡವನನ್ನು ಮುಲ್ಕಿ ಸಮೀಪದ ಕರ್ನಿರೆ ನಿವಾಸಿ ಸುಜನ್ ಶೆಟ್ಟಿ (20) ಎಂದು ಗುರುತಿಸಲಾಗಿದೆ.

ಇಂದು ಕಾಲೇಜಿನಲ್ಲಿ ಕಾಲೇಜು ಡೇ ಫಂಕ್ಷನ್ ನಡೆಯುತ್ತಿದ್ದು, ಈ ಸಂದರ್ಭ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಹಳೆ ವೈಷಮ್ಯದಿಂದ ಮಾತಿನ ಚಕಮಕಿ ನಡೆದು ನೂಕಾಟ ತಳ್ಳಾಟ ನಡೆದಿದೆ.

ಈ ಸಂದರ್ಭ ಒಂದು ಗುಂಪಿನ ಸುಮಾರು 10ಮಂದಿ ವಿದ್ಯಾರ್ಥಿಗಳು ಹಾಗೂ ಹೊರಗಿನವರು ಸೇರಿ ಕರ್ನಿರೆ ನಿವಾಸಿ ಸುಜನ್ ಶೆಟ್ಟಿ ಎಂಬವರ ಮೇಲೆ ಹಿಗ್ಗಾ ಮುಗ್ಗ ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ನಡೆಸಿದ್ದು ಗಾಯಗೊಂಡ ಸುಜನ್ ಮುಲ್ಕಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ.

- Advertisement -

Related news

error: Content is protected !!