Tuesday, July 1, 2025
spot_imgspot_img
spot_imgspot_img

ಮೂಲವ್ಯಾಧಿ ನಿವಾರಣೆಗೆ ಇಲ್ಲಿದೆ ಪವರ್‌ಫುಲ್ ಹಳ್ಳಿಮದ್ದು

- Advertisement -
- Advertisement -

ಪೈಲ್ಸ್ ಅಥವಾ ಹೆಮೊರೊಯಿಡ್ಸ್ ಗುದನಾಳದ ಮತ್ತು ಗುದ ಕಾಲುವೆಯ ಗೋಡೆಗಳೊಳಗಿನ ರಕ್ತನಾಳಗಳಾಗಿವೆ. ಈ ರಕ್ತನಾಳಗಳು ಊದಿಕೊಂಡಾಗ ಮತ್ತು ಅವುಗಳ ಮೇಲಿನ ಅಂಗಾಂಶವು ಹಿಗ್ಗಿದಾಗ ಪೈಲ್ಸ್ ಸಂಭವಿಸುತ್ತದೆ. ಈ ಪ್ರಕ್ರಿಯೆಯು ಚೀಲದಂತಹ ರಚನೆಯನ್ನು ಸೃಷ್ಟಿಸುತ್ತದೆ.ಇದು ನಮ್ಮ ಕರುಳಿನ ಚಲನೆಯ ಸಮಯದಲ್ಲಿ ಮತ್ತಷ್ಟು ಒತ್ತಡವನ್ನು ಪಡೆಯುತ್ತದೆ, ಇದರಿಂದಾಗಿ ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

ಪೈಲ್ಸ್‌ ಲಕ್ಷಣಗಳು: ಮಲವನ್ನು ಹಾದು ಹೋಗುವಾಗ ರಕ್ತ ಸ್ರವಿಸುವುದು, ಗುದನಾಳದಲ್ಲಿ ನೋವಿನ ಗಟ್ಟಿಯಾದ ಗಂಟು-ತುರಿಕೆ, ಗುದ ಪ್ರದೇಶದಲ್ಲಿ ಊತ, ಮಲವನ್ನು ಹಾದು ಹೋಗುವಾಗ ಪ್ರಕಾಶಮಾನವಾದ ಕೆಂಪು ರಕ್ತ,

ಶಸ್ತ್ರಚಿಕಿತ್ಸೆ: ಹಲವಾರು ರೀತಿಯ ಮೂಲವ್ಯಾಧಿ ಚಿಕಿತ್ಸೆಗಳು ಲಭ್ಯವಿದೆ. 1. ಔಷಧಿ ಮತ್ತು ಮನೆಮದ್ದುಗಳು. 2. ಸಾಂಪ್ರದಾಯಿಕ ಓಪನ್ ಸರ್ಜರಿ. 3. ಅತ್ಯಾಧುನಿಕ ಲೇಸರ್ ಚಿಕಿತ್ಸೆ.

ಮೂಲವ್ಯಾಧಿ ಸಮಸ್ಯೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆ ಆಗಿದೆ. ಮೂಲವ್ಯಾಧಿ ಅಥವಾ ಫೈಲ್ಸ್ ಸಮಸ್ಯೆ ಬಂತೆಂದರೆ ಆ ವ್ಯಕ್ತಿಗೆ ಮಲವಿಸರ್ಜನೆಯ ಸಮಯದಲ್ಲಿ ಊಹಿಸಲಾರದಷ್ಟು ನೋವು ಕಾಡುತ್ತದೆ. ಈ ಸಮಸ್ಯೆಯಿಂದ ನರಳುತ್ತಿರುವ ಅದೆಷ್ಟೋ ಜನರು ನಾಚಿಕೆಯಿಂದ ವೈದ್ಯರ ಬಳಿ ತಮ್ಮ ಸಂಕಷ್ಟವನ್ನು ಹೇಳಿಕೊಳ್ಳುವುದೇ ಇಲ್ಲ. ಈ ರೀತಿಯಲ್ಲಿ ನಿರ್ಲಕ್ಷ್ಯ ತೋರಬಾರದು, ಚಿಕಿತ್ಸೆ ಪಡೆಯುವುದು ಉತ್ತಮ.

ಮೂಲವ್ಯಾಧಿಯು ಗುದದ್ವಾರ ಮತ್ತು ಗುದನಾಳಗಳಲ್ಲಿಯ ನಾಳಗಳು ಊದಿಕೊಂಡು ಮಲವಿಸರ್ಜನೆಯ ಸಮಯದಲ್ಲಿ ನೋವನ್ನು ಉಂಟುಮಾಡುವ ಕಾಯಿಲೆಯಾಗಿದೆ. ಕೆಲವರಿಗೆ ಗುದದ್ವಾರದ ಹೊರಭಾಗದಲ್ಲಿ ಫೈಲ್ಸ್ ಉಂಟಾದರೆ ಮತ್ತೆ ಕೆಲವರಿಗೆ ಗುದದ್ವಾರದ ಒಳಗೆ ಕಂಡುಬರುತ್ತದೆ. ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಪಡೆದುಕೊಳ್ಳುವ ಸಲುವಾಗಿ ಯಾವ ಯಾವ ಮದ್ದುಗಳನ್ನು ಮಾಡಿಕೊಳ್ಳಬಹುದು, ಪರಿಣಾಮಕಾರಿಯಾದ ಮನೆಮದ್ದುಗಳು ಯಾವವು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

  • ಮೂಲವ್ಯಾಧಿಯ ನಿವಾರಣೆಗೆ ಕೊತ್ತಂಬರಿ ಬೀಜ ಹಾಕಿ ತಯಾರಿಸಿದ ಕಷಾಯಕ್ಕೆ ಕಲ್ಲುಸಕ್ಕರೆ ಸೇರಿಸಿ ಸೇವಿಸುವುದು ಉತ್ತಮ ಪರಿಣಾಮವನ್ನು ನೀಡುತ್ತದೆ.ಮೂಲವ್ಯಾಧಿಯಲ್ಲಿ ಗಂಟು ಆಗಿದ್ದರೆ ಅಂದ್ರೆ, ನೋವು ಇಲ್ಲದೆ ಮತ್ತು ರಕ್ತವೂ ಬೀಳದೆ ಗಂಟು ಮಾತ್ರ ಇದ್ರೆ, ಅದಕ್ಕೆ ಶುಂಠಿ ಕಷಾಯ ಮಾಡಿ ಸೇವಿಸುವುದರಿಂದ ಗಂಟು ಕಡಿಮೆಯಾಗುತ್ತದೆ.
  • ಮೂಲವ್ಯಾಧಿಯಿಂದ ಹೆಚ್ಚು ನೋವು ಮತ್ತು ನವೆ ಸಹಿತ ಕಾಡುವ ಮೂಲವ್ಯಾಧಿ ನಿವಾರಣೆಗೆ ಅಳಲೆಕಾಯಿ ಪುಡಿಗೆ ಬೆಲ್ಲ ಸೇರಿಸಿ ಸೇವಿಸುವುದು ಉತ್ತಮ.
  • ಮೂಲವ್ಯಾಧಿಯಿಂದ ಮಲವಿಸರ್ಜನೆಗೆ ಕಷ್ಟವಾಗುತ್ತಿದ್ದರೆ, ತುಪ್ಪದಲ್ಲಿ ಹುರಿದ ಅಳಲೆಕಾಯಿಗೆ ಹಿಪ್ಪಲಿ ಹಾಗೂ ಬೆಲ್ಲ ಸೇರಿಸಿ ತಿನ್ನೋದ್ರಿಂದ ಮಲ ವಿಸರ್ಜನೆ ಸುಲಭವಾಗುತ್ತದೆ.

ಮೂಲವ್ಯಾಧಿ ಸಮಸ್ಯೆಗೆ ಕಡೆದ ಮಜ್ಜಿಗೆ, ಹಸಿ ಮೂಲಂಗಿ, ಹಸಿ ಕ್ಯಾರೆಟ್‌, ಹೆಸರು ಬೇಳೆ, ಒಣ ದ್ರಾಕ್ಷಿ ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇವಿಸಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.

ಮುಟ್ಟಿದರೆ ಮುನಿ / ನಾಚಿಕೆ ಮುಳ್ಳಿನ ಗಿಡದ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿ ಇಟ್ಟುಕೊಳ್ಳಿ. ಇದನ್ನು ಪ್ರತಿದಿನ ಒಂದು ಲೋಟ ನೀರಿಗೆ ಒಂದು ಚಮಚ ಹಾಕಿಕೊಂಡು ಸೇವನೆ ಮಾಡುವುದರಿಂದ ಮೂಲವ್ಯಾಧಿ ದೂರವಾಗುತ್ತದೆ.

ಬಿಲ್ವಪತ್ರೆಯ ಎಳೆಗಳ ರಸವನ್ನು ತೆಗೆದು ಪ್ರತಿದಿನ ಸೇವನೆ ಮಾಡುತ್ತಾ ಬರುವುದರಿಂದ ಮೂಲವ್ಯಾಧಿ ದೂರವಾಗುತ್ತದೆ.

ಮೂಲಂಗಿಯನ್ನು ತುರಿದು ಮೊಸರಿನೊಂದಿಗೆ ಬೆರೆಸಿ, ಉಪ್ಪು ಮತ್ತು ಲಿಂಬೆರಸವನ್ನು ಹಾಕಿ ಅನ್ನದೊಂದಿಗೆ ಸೇವಿಸುವುದರಿಂದ ಮೂಲವ್ಯಾಧಿ ದೂರವಾಗುತ್ತದೆ.

ಮೂಲವ್ಯಾಧಿಗೆ ನೇರಳೆಹಣ್ಣು ಉತ್ತಮ ನೈಸರ್ಗಿಕ ಪರಿಹಾರವಾಗಿದೆ. ಇದಲ್ಲದೇ ಅಂಜೂರ ಸಹ ತುಂಬಾನೇ ಸಹಕಾರಿಯಾಗಿದೆ.

ಇನ್ನು ಮೂಲವ್ಯಾಧಿಗೆ ಪ್ರಮುಖ ಕಾರಣ ಮಲಬದ್ಧತೆ. ಇದರ ನಿವಾರಣೆಗೆ 4 ಗ್ರಾಂ ನಷ್ಟು ತ್ರಿಫಲ ಪುಡಿಯನ್ನು ಬಿಸಿನೀರಲ್ಲಿ ಬೆರೆಸಿ ನಿಯಮಿತವಾಗಿ ಸೇವಿಸಬೇಕು. ಇದರಿಂದಾಗಿ ಮಲಬದ್ಧತೆ ದೂರವಾಗುತ್ತದೆ. ಅದರೊಂದಿಗೆ ಮೂಲವ್ಯಾಧಿಯೂ ನಿಯಂತ್ರಣಕ್ಕೆ ಬರುತ್ತದೆ.

ಮೂಲವ್ಯಾಧಿ ನಿವಾರಣೆಗೆ ಮಾವಿನ ಗೊರಟೆಗಳನ್ನು ಸ್ವಚ್ಛಗೊಳಿಸಿ, ಒಣಗಿಸಿಕೊಳ್ಳಬೇಕು. ಇದನ್ನು ಪುಡಿಮಾಡಿ ಪ್ರತಿದಿನ ಎರಡು ಚಮಚದಂತೆ ಜೇನಿನೊಡನೆ ಸೇವಿಸಬೇಕು.

ಮೂಲವ್ಯಾಧಿಯ ತೀವ್ರತೆಯನ್ನು ನಿಯಂತ್ರಿಸಲು ಅಲೋವೆರಾ / ಲೋಳೆಸರದ ತಿರುಳನ್ನು ಒಂದು ಚಮಚದಷ್ಟು ತೆಗೆದು ದಿನಕ್ಕೆ ಮೂರು ಬಾರಿಯಂತೆ ಸೇವಿಸುತ್ತಾ ಬರಬೇಕು.

ಸಾಮಾನ್ಯವಾಗಿ ಮೂಲವ್ಯಾಧಿಯಿಂದ ಬಳಲುವವರು ಮಲಬದ್ಧತೆಯಿಂದಲೂ ಬಳಲುತ್ತಾರೆ. ಇದಲ್ಲದೇ ಮಲವು ಗಟ್ಟಿಯಾಗುವುದರಿಂದ ಮಲವಿಸರ್ಜನೆಯ ಸಮಯದಲ್ಲಿ ರಕ್ತ ಬರುತ್ತದೆ. ಹಾಗಾಗಿ ಮಲಬದ್ಧತೆ ನಿವಾರಣೆಗೆ ಹೆಚ್ಚಿನ ಫೈಬರ್ ಯುಕ್ತ ಆಹಾರವನ್ನು ಸೇವಿಸಿ. ಅಲ್ಲದೇ ನೀರನ್ನು ಚೆನ್ನಾಗಿ ಕುಡಿಯಬೇಕು ಮತ್ತು ಮೂಲಂಗಿ, ಕ್ಯಾರೆಟ್ ಮತ್ತು ಸೌತೆಕಾಯಿ ಸೇರಿದಂತೆ ತರಕಾರಿಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಶೀಘ್ರದಲ್ಲಿಯೇ ನಿಮ್ಮ ಸಮಸ್ಯೆಯು ದೂರವಾಗುತ್ತದೆ.

- Advertisement -

Related news

error: Content is protected !!