- Advertisement -


- Advertisement -
ವಾಷಿಂಗ್ಟನ್: ಅಮೆರಿಕಾ ಕೋರ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗ್ರಹ ಸಚಿವ ಅಮಿತ್ ಷಾ ವಿರುದ್ಧ ದಾಖಲಾಗಿದ್ದ ಕೇಸ್ಗಳನ್ನ ಕೋರ್ಟ್ ವಜಾ ಮಾಡಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿದ್ದನ್ನ ಪ್ರಶ್ನಿಸಿ ಪ್ರತ್ಯೇಕತಾವಾದಿ ಕಾಶ್ಮೀರ ಖಲಿಸ್ತಾನ್ ಸಂಘಟನೆ ಮತ್ತು ಅದರ ಇಬ್ಬರು ಸಹಚರರಿಂದ ಅರ್ಜಿ ಸಲ್ಲಿಸಲಾಗಿತ್ತು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಲೆಫ್ಟಿನೆಂಟ್ ಜನರಲ್ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ 100 ಮಿಲಿಯನ್ ಅಮೆರಿಕನ್ ಡಾಲರ್ ಪರಿಹಾರವಾಗಿ ನೀಡಬೇಕೆಂದು ಕೇಳಿದ್ದರು. ಧಿಲ್ಲಾನ್ ಅವರು ಈಗ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿಯ ಡೈರೆಕ್ಟರ್-ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕಾ ನ್ಯಾಯಾಲಯ, ಅರ್ಜಿದಾರರು ಅರ್ಜಿ ಹಾಕಿದ್ದಾರೆ ಆದ್ರೆ ವಿಚಾರಣೆಗೆ ಹಾಜರಾಗಿಲ್ಲ ಅಂತ ಹೇಳಿ ಕೇಸ್ ಅನ್ನೇ ವಜಾ ಮಾಡಿ ಆದೇಶ ಹೊರಡಿಸಿದೆ.


- Advertisement -