Wednesday, September 2, 2026
spot_imgspot_img
spot_imgspot_img

ರಾತ್ರಿ ವೇಳೆ ಮನೆಗೆ ತಡವಾಗಿ ಬಂದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ದುಷ್ಟ ತಂದೆ!

- Advertisement -
- Advertisement -

ಮಧ್ಯಪ್ರದೇಶ: ರಾತ್ರಿ ವೇಳೆ ಮನೆಗೆ ತಡವಾಗಿ ಬಂದಿದ್ದಾಳೆ ಎಂಬ ಕಾರಣಕ್ಕೆ ಹತ್ತು ವರ್ಷದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ದಾರುಣ ಘಟನೆ ಮಧ್ಯಪ್ರದೇಶದ ಮೊರೆನಾದ ಉತ್ತಮ್ ಪುರಂ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿ ರಾಕೇಶ್ ಜಾತವ್ ಎನ್ನಲಾಗಿದೆ.

ಘಟನೆಯ ವಿವರ: ಕೊಲೆಯಾದ ಬಾಲಕಿ ನೆರೆಮನೆಯ ಸ್ನೇಹಿತೆಯರೊಂದಿಗೆ ದುರ್ಗಾ ಪೂಜೆಗೆ ತೆರಳಿದ್ದಳು. ಅಲ್ಲಿಂದ ಮನೆಗೆ ಮರಳುವಾಗ ತಡರಾತ್ರಿ 11 ಗಂಟೆಯಾಗಿತ್ತು. ಈ ಕಾರಣಕ್ಕಾಗಿ ಕೋಪಗೊಂಡ ತಂದೆ ಕೋಲಿನಿಂದ ಮನಬಂದಂತೆ ಹೊಡೆದಿದ್ದಾನೆ. ಹೊಡೆತದಿಂದ ತೀವ್ರವಾಗಿ ಗಾಯಗೊಂಡ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ

ಆರೋಪಿ ರಾಕೇಶ್ ಜಾತವ್ ಗೆ ಕುಡಿತದ ಚಟವಿದ್ದು, ದಿನನಿತ್ಯ ಪತ್ನಿ ಮತ್ತು ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

- Advertisement -

Related news

error: Content is protected !!