Monday, November 23, 2026
spot_imgspot_img
spot_imgspot_img

ಕಾಪು ಬೀಚ್ ನಲ್ಲಿ ಕೊಚ್ಚಿಹೋಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ..!

- Advertisement -
- Advertisement -

ಕಾಪು: ಕಾಪು ಬೀಚ್‌ನಲ್ಲಿ ಭಾನುವಾರ ಸಂಜೆ ಈಜಲು ಸಮುದ್ರಕ್ಕಿಳಿದು ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಸೋಮವಾರ ಮಧ್ಯಾಹ್ನ(ನ.23) ಪತ್ತೆಯಾಗಿವೆ.

ಮೃತರನ್ನು ಶಿವಮೊಗ್ಗ ಮೂಲದ ಕುಂದಾಪುರದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಸಮೀರ್(20) ಮತ್ತು ದಾವಣಗೆರೆ ಜಿಲ್ಲೆಯ ಮಲ್ಲಿಕ್ ರಿಹಾನ್(15) ಎಂದು ಗುರುತಿಸಲಾಗಿದೆ.

ದಾವಣಗೆರೆಯಿಂದ ಕಾಪು ಬೀಚಿಗೆ ವಿಹಾರಕ್ಕೆ ಬಂದಿದ್ದ 12 ಮಂದಿ ಪೈಕಿ ಐವರು ಯುವಕರು ಸಮುದ್ರಕ್ಕೆ ಇಳಿದು ಈಜುತ್ತಿದ್ದರು. ಇವರಲ್ಲಿ ಮೂವರು ಸಮುದ್ರ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಜೀವ ರಕ್ಷಕ ದಳದ ಸಿಬ್ಬಂದಿಗಳು ಮೂವರಲ್ಲಿ ಓರ್ವನನ್ನು ರಕ್ಷಿಸಿದ್ದರು.

ಉಳಿದ ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ತಡರಾತ್ರಿಯವರೆಗೂ ಇವರಿಬ್ಬರಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಇಂದು ಬೆಳಗ್ಗೆ ಸಮೀರ್ ಮತ್ತು ಮಧ್ಯಾಹ್ನ ವೇಳೆ ರಿಹಾನ್ ಮೃತದೇಹ ಮುಳುಗಿದ ಸ್ಥಳದ ಸಮೀಪವೇ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!