Tuesday, July 1, 2025
spot_imgspot_img
spot_imgspot_img

ರಾವತ್ ಬಲಿ ಪಡೆದ ದುರಂತದ ಕುರಿತು ಆಕ್ಷೇಪಾರ್ಹ ಪೋಸ್ಟ್​; ಕಠಿಣ ಕ್ರಮಕ್ಕೆ ಸಿಎಂ ಬೊಮ್ಮಾಯಿ ಆದೇಶ

- Advertisement -
- Advertisement -
vtv vitla
vtv vitla

ಬೆಂಗಳೂರು: ಹುತಾತ್ಮ ಬಿಪಿನ್ ರಾವತ್​ ಸಾವಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಮತ್ತು ಸೋಶಿಯಲ್​ ಮೀಡಿಯಾಗಳಲ್ಲಿ ಪೋಸ್ಟ್​ ಹಾಕಿರುವವರ ವಿರುದ್ಧ ಈ ಕೂಡಲೇ ಕ್ರಮತೆಗೆದುಕೊಳ್ಳಿ ಅಂತಾ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ನೀಡಿದ್ದಾರೆ.

ಈ ಬಗ್ಗೆ ಟ್ವಿಟರ್​ನಲ್ಲಿ ಸ್ಪಷ್ಟಪಡಿಸಿರುವ ಅವರು.. ಸಾಮಾಜಿಕ ಮಾಧ್ಯಮಗಳಲ್ಲಿ ಬಿಪಿನ್ ರಾವತ್ ಬಲಿ ಪಡೆದ ಹೆಲಿಕಾಪ್ಟರ್​ ದುರಂತದ ಕುರಿತು ಆಕ್ಷೇಪಾರ್ಹ ಪೋಸ್ಟ್​​ಗಳು ಹರಿದಾಡುತ್ತಿವೆ. ಅಂತವರನ್ನ ಕ್ಷಮಿಸಲು ಅಸಾಧ್ಯ. ಅಕ್ಷೇಪಾರ್ಹ ಸಂದೇಶಗಳನ್ನ ನಾನು ಖಂಡಿಸುತ್ತೇನೆ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

vtv vitla

ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಸಿಡಿಎಸ್​ ಬಿಪಿನ್ ರಾವತ್ ಇದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿತ್ತು. ಪರಿಣಾಮ ಹೆಲಿಕಾಪ್ಟರ್​​ನಲ್ಲಿದ್ದ ಬಿಪಿನ್ ರಾವತ್ ಮತ್ತು ಅವರ ಪತ್ನಿ ಹಾಗೂ 11 ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ದುರಂತದಲ್ಲಿ ಓರ್ವ ಗ್ರೂಪ್​ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದಾರೆ.

vtv vitla
vtv vitla
- Advertisement -

Related news

error: Content is protected !!