Tuesday, August 11, 2026
spot_imgspot_img
spot_imgspot_img

ರಿಂಗ್‌ ನೆಟ್‌ಗಳ ಬಳಕೆ ವಿರೋಧಿಸಿ ಮೀನುಗಾರರ ನಡುವೆ ವಾಗ್ವಾದ; ಬೋಟ್‌ಗೆ ಬೆಂಕಿ

- Advertisement -
- Advertisement -

ವಿಶಾಖಪಟ್ಟಣಂ: ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ರಿಂಗ್‌ ನೆಟ್‌ಗಳ ಬಳಕೆ ವಿರೋಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮೀನುಗಾರರ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದು, ಸಮುದ್ರದ ನಡುವೆ ಬೋಟ್‌‌ಗೆ ಬೆಂಕಿ ಹಚ್ಚಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

ವಿಶಾಖಪಟ್ಟಣಂನ ಚಿನ್ನಜಾಲರಿಪೇಟ, ಪೆದ್ದಜಾಲರಿಪೇಟಗಳ ಮೀನುಗಾರರು ಮೀನುಗಾರಿಕೆಗಾಗೆಂದು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಮೀನುಗಾರರ ಗುಂಪೊಂಡು ನಿರ್ಬಂಧಿತ ಪ್ರದೇಶಗಳಲ್ಲಿಯೂ ರಿಂಗ್‌‌ ನೆಟ್‌ ಅನ್ನು ಬಳಕೆ ಮಾಡಿ ಮೀನುಗಾರಿಕೆಗೆ ಮುಂದಾಗಿತ್ತು. ಸಾಂಪ್ರದಾಯಿಕ ಶೈಲಿಯ ಬಲೆಗಳನ್ನು ಬಳಕೆ ಮಾಡುವ ಇನ್ನೊಂದು ಗುಂಪು ಇದನ್ನು ಆಕ್ಷೇಪಿಸಿದ್ದು, ಈ ಸಂದರ್ಭ ವಾಗ್ವಾದ ನಡೆದಿದೆ. ಈ ವೇಳೆ ಮೀನುಗಾರರ ಒಂದು ಗುಂಪು ಮತ್ತೊಂದು ಗುಂಪಿನ ಬೋಟ್‌‌ಗೆ ಬೆಂಕಿ ಹಚ್ಚಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಹದ್ದುಮೀರದಂತೆ ನಿಯಂತ್ರಿಸಿದ್ದಾರೆ.

ಸಾಂಪ್ರದಾಯಿಕ ಶೈಲಿಯ ನೆಟ್‌ಗಳನ್ನು ಬಳಕೆ ಮಾಡುವ ಹಾಗೂ ರಿಂಗ್‌‌‌‌‌ ನೆಟ್‌ಗಳನ್ನು ಬಳಕೆ ಮಾಡುವ ಮೀನುಗಾರರ ನಡುಗೆ ಆಗಾಗ ಈ ರೀತಿಯಾದ ವಾಗ್ವಾದಗಳು ನಡೆಯುತ್ತಿರುತ್ತವೆ. ರಿಂಗ್‌ ಬಳಕೆ ಮಾಡಿದರೆ ಸಣ್ಣ ಜಲಚರಗಳು ಬಲೆಗೆ ಸಿಲುಕಲಿದ್ದು, ಈ ಕಾರಣದಿಂದ ಜಲಚರಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಾಂಪ್ರದಾಯಿಕ ಶೈಲಿಯ ಬಲೆಗಳನ್ನು ಬಳಕೆ ಮಾಡುವವ ಆರೋಪ.

- Advertisement -

Related news

error: Content is protected !!