Monday, May 6, 2024
spot_imgspot_img
spot_imgspot_img

ವಿಶ್ವದಲ್ಲೇ ಪಾಕಿಸ್ತಾನದ್ದು ನಾಲ್ಕನೇ ಕಳಪೆ ಪಾಸ್‌ಪೋರ್ಟ್.!

- Advertisement -G L Acharya panikkar
- Advertisement -

ಪಾಕಿಸ್ತಾನದ ಪಾಸ್‌ಪೋರ್ಟ್‌ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ವಿಶ್ವದಲ್ಲೇ ನಾಲ್ಕನೇ ಕಳಪೆ ಸ್ಥಾನದಲ್ಲಿದೆ. ಇನ್ನು ವಿಶ್ವದಲ್ಲಿ ಅತ್ಯಂತ ಪ್ರಬಲ ಪಾಸ್‌ಪೋರ್ಟ್ ಹೊಂದಿರುವ ದೇಶಗಳಲ್ಲಿ ಜಪಾನ್ ಮತ್ತು ಸಿಂಗಾಪುರ ಅಗ್ರ ಸ್ಥಾನದಲ್ಲಿ ನಿಂತಿದೆ.

ಹೆನ್ಲಿ ಪಾಸ್​ಪೋರ್ಟ್ ಸೂಚ್ಯಂಕ ಎಂಬುದು ಆ ರೀತಿ ವಿಶ್ವದ ಎಲ್ಲ ಪಾಸ್​​ಪೋರ್ಟ್​ಗಳನ್ನು ಅಳೆದು, ಅದಕ್ಕೊಂದು ಶ್ರೇಯಾಂಕ ನೀಡುವಂಥ ಅಧಿಕಾರಯುತ ಸೂಚ್ಯಂಕವಾಗಿದೆ. ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯಿಂದ (ಐಎಟಿಎ) ಪಡೆದ ಮಾಹಿತಿಗಳ ಆಧಾರದಲ್ಲಿ ಹೆನ್ಲಿ & ಪಾರ್ಟ್ನರ್ಸ್ ಈ ಪಾಸ್‌ಪೋರ್ಟ್ ಸೂಚ್ಯಂಕ ಸಿದ್ಧಪಡಿಸಿದೆ. ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಯಾವುದೇ ಪೂರ್ವ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಭೇಟಿ ನೀಡಬಹುದು ಎಂಬ ಲೆಕ್ಕದ ಆಧಾರದಲ್ಲಿ ಈ ಸೂಚ್ಯಂಕ ರೂಪಿಸಲಾಗುತ್ತದೆ.

ಸೂಚ್ಯಂಕದ ಪ್ರಕಾರ, ಪಾಕಿಸ್ತಾನವು ಪಟ್ಟಿಯಲ್ಲಿ 109 ನೇ ಸ್ಥಾನದಲ್ಲಿದೆ. ಕೇವಲ ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನ ದೇಶದ ಪಾಕಿಸ್ತಾನಕ್ಕಿಂತ ಕೆಳಗಿನ ಸ್ಥಾನದಲ್ಲಿವೆ. ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಟಾಪ್ ಟೆನ್ ಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದ್ದು ಜಪಾನ್ ಮತ್ತು ಸಿಂಗಾಪುರವು ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಹಂಚಿಕೊಳ್ಳುವುದನ್ನು ಮುಂದುವರೆಸಿದೆ.

- Advertisement -

Related news

error: Content is protected !!