Monday, June 30, 2025
spot_imgspot_img
spot_imgspot_img

ಲಬ್ ಡಬ್ ಕನ್ನಡ‌ ಆಲ್ಬಮ್ ಸಾಂಗ್ ಬಿಡುಗಡೆ..! ನೊಂದ ಮನದ ಲಹರಿಗೆ ಸಾವಿರಾರು ಮಂದಿ ಮೆಚ್ಚುಗೆ

- Advertisement -
- Advertisement -

ಪ್ರೀತಿಯ ನೋವನ್ನು ತೋರಿಸುವ “ಲಬ್ ಡಬ್” ಶೀರ್ಷಿಕೆಯ ‌ಕನ್ನಡ ಆಲ್ಬಮ್ ಸಾಂಗ್ ಬಿಡುಗಡೆಯಾಗಿದೆ. ಕಾವೇರಿ ಪ್ರೊಡಕ್ಷನ್ ಅರ್ಪಿಸುವ ಈ ಆಲ್ಬಮ್ ಸಾಂಗ್ A2 Entertainment ಯೂಟ್ಯೂಬ್ ಚಾನಲ್ ನಲ್ಲಿ ರೀಲಿಸ್ ಆಗಿದ್ದು, ಸಾವಿರಾರು ವೀಕ್ಷಕರ‌ ಮೆಚ್ಚುಗೆಗೆ ಪಾತ್ರವಾಗಿದೆ.

ಹಾಡಿನಲ್ಲಿದೆ ಹಲವು ವಿಶೇಷತೆ..!
ನಾವು ಬ್ರೇಕ್ ಅಪ್ ಸಾಂಗ್, ಲವ್ ಫೀಲಿಂಗ್ ಸಾಂಗ್, ಲವ್ ಸೆಲೆಬ್ರೇಷನ್ ಸಾಂಗ್ ಕೇಳಿರುತ್ತೇವೆ. ಇಲ್ಲಿಯೂ ವಿಭಿನ್ನ ಪ್ರಯೋಗದೊಂದಿಗೆ ಯುವಕರ ತಂಡ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಪ್ರೀತಿಯ ನೋವನ್ನು ತೋರಿಸುವ ವಿಶೇಷ ಕಥಾಹಂದರವನ್ನು ಪೋಣಿಸಿದ “ಲಬ್ ಡಬ್” ಕನ್ನಡ ಆಲ್ಬಂ ಹಾಡು ಯ್ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡು ಪ್ರೇಕ್ಷಕ ವರ್ಗಕ್ಕೆ ಹೊಸ ಶೈಲಿಯ ಆಲ್ಬಂ ಸಾಂಗ್ ಅನ್ನು ಉಣಬಡಿಸಿದೆ.

ಪ್ರೇಮ ಕಥೆಯನ್ನು ಸಿಂಪಲ್‌ ಆಗಿ ಹಿನ್ನಲೆ ಧ್ವನಿ ಮೂಲಕ ಕಟ್ಟಿ ಕೊಟ್ಟರೆ ಅದ್ಭುತವಾದ ಧ್ವನಿ, ಸಂಕಲನ, ಟೀಮ್‌ ವರ್ಕ್‌ ಆಲ್ಬಂ ಸಾಂಗ್ ಅನ್ನು ಲಕ್ಷ್ಯುರಿಯಾಗಿಸಿದೆ.

ಶಿವಪ್ರಸಾದ್‌ ಅವರ ನಿರ್ಮಾಣ ಮತ್ತು ನಿರ್ದೇಶನವಿದ್ದು, ಧನರಾಜ್ ಬಂಟ್ವಾಳ ಅವರ ಸಾಹಿತ್ಯವಿದೆ. ಅಖಿಲೇಶ್ ಸಾಲ್ಯಾನ್ ಹಾಗೂ ಪವಿತ್ರ ಅಂಚನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ ಅನೇಕ ಸಹಕಲಾವಿದರು ಬಣ್ಣ ಹಚ್ಚಿದ್ದಾರೆ. ಮಲ್ಲಿಕಾ ಮಟ್ಟಿ ಅವರು ಹಾಡು ಹಾಡಿದ್ದಾರೆ. ರೋಹಿತ್ ಪೂಜಾರಿ ಅವರ ಸಂಗೀತ, ಪ್ರದೀಪ್ ನಾಯ್ಕ್ ಅವರ ಛಾಯಗ್ರಹಣ ಮತ್ತು ಸಂಕಲನ ವಿಶೇಷ ರೀತಿಯಲ್ಲಿ ಗಮನಸೆಳೆದಿದೆ.

A2 Entertainment ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಹಾಡು ವೀಕ್ಷಿಸಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

astr
- Advertisement -

Related news

error: Content is protected !!