Saturday, August 29, 2026
spot_imgspot_img
spot_imgspot_img

ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ನಗರಸಭೆ ಸದಸ್ಯನ ಬರ್ಬರ ಹತ್ಯೆ

- Advertisement -
- Advertisement -

ಹಾಸನ: ಹಾಸನ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ನಾಗರಾಜ್ (40) ಅವರನ್ನು ಬುಧವಾರ ಸಂಜೆ ನಗರದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಪ್ರಶಾಂತ್ ಅವರು ನಗರದಿಂದ ಅಡ್ಲಿಮನೆ ರಸ್ತೆಯಲ್ಲಿರುವ ತಮ್ಮ ಮನೆಗೆ ಹೋಂಡಾ ಅಕ್ಟೀವಾ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಆಟೋದಲ್ಲಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು ನಗರದ ಜವೇನಹಳ್ಳಿ ಮಠದ ಸಮೀಪ ಮಚ್ಚು, ಲಾಂಗ್ ಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

15 ವರ್ಷಗಳ ಹಿಂದೆ ಪ್ರಶಾಂತ್ ನಾಗರಾಜ್ ತಂದೆ ನಗರಸಭಾ ಮಾಜಿ ಸದಸ್ಯ ಹಾ.ರಾ.ನಾಗರಾಜ್ ಅವರನ್ನು ಹತ್ಯೆ ಮಾಡಲಾಗಿತ್ತು.

ಈಗ ದ್ವೇಷ ಸಾಧನೆ ಹಿನ್ನೆಯಲ್ಲಿಯೇ ಪ್ರಶಾಂತ್ ಅವರ ಮನೆ ಪರಿಸರದ ಪುಂಡರ ಗ್ಯಾಂಗ್ ಈ ದುಷ್ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ.

- Advertisement -

Related news

error: Content is protected !!