- Advertisement -



- Advertisement -
ಶಿವಮೊಗ್ಗ: ವಿಚಾರಣಾಧೀನದಲ್ಲಿದ್ದ, ಕೈದಿ ಮಾನಸಿಕ ಖಿನ್ನತೆಯಿಂದ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಆರೋಪಿ ಕಲೀಂ (37) ಮೃತಪಟ್ಟ ಕೈದಿ ಎಂದು ಗುರುತಿಸಲಾಗಿದೆ.
ಕಲೀಂ ಕಳೆದ ಒಂದು ತಿಂಗಳ ಹಿಂದೆ ಪೋಕ್ಸೋ (POCSO) ಕಾಯ್ದೆಯಡಿ ಬಂಧಿಸಲಾಗಿತ್ತು. ಕಲೀಂ ಕಿಡ್ನಿ ಸಮಸ್ಯೆ, ಲೋ ಬಿಪಿ, ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದು, ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಸಾವಿನ ಬಗ್ಗೆ ಕಲೀಂ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಜೈಲಿನಲ್ಲಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸದ್ದಾರೆ.
- Advertisement -