Thursday, June 18, 2026
spot_imgspot_img
spot_imgspot_img

ಕಚ್ಚಾ ತೈಲ ಬೆಲೆ ಇಳಿಕೆಯಾದರೂ ತಕ್ಷಣ ಇಂಧನ ದರ ಕಡಿತ ಸಾಧ್ಯವಿಲ್ಲ: ಕೇಂದ್ರ ಸಚಿವ ಸುರೇಶ್ ಗೋಪಿ

- Advertisement -
- Advertisement -

ಹೊಸದಿಲ್ಲಿ: ಜಾಗತಿಕ ಕಚ್ಚಾ ತೈಲ ಬೆಲೆ ಇಳಿಕೆಯಾದ ತಕ್ಷಣ ಇಂಧನ ಬೆಲೆ ಇಳಿಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಗುರುವಾರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಇತ್ತೀಚೆಗೆ ಇಂಧನ ಬೆಲೆಯಲ್ಲಿ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ ಸುಮಾರು 3.94 ರೂ. ಹೆಚ್ಚಳ ಮಾತ್ರ ಪರಿಣಾಮ ಬೀರಿದೆ.

ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಅದನ್ನು ಇಂಧನ ದರ ತಕ್ಷಣ ಇಳಿಕೆ ಸಾಧ್ಯವಿಲ್ಲ. ಎಲ್ಲವೂ ಸಹಜ ಸ್ಥಿತಿಗೆ ಬರಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.ಹಾರ್ಮುಝ್ ಜಲಸಂಧಿಯ ಮೂಲಕ ಭಾರತಕ್ಕೆ ಅಗ್ಗದ ಕಚ್ಚಾ ತೈಲವನ್ನು ಸಾಗಿಸಬೇಕಾಗಿರುವುದರಿಂದ ಸಮಯ ತೆಗೆದುಕೊಳ್ಳುತ್ತದೆ. ಹಾರ್ಮುಝ್ ನಲ್ಲಿ ಹಡಗು ಸಂಚಾರದ ಅತಿಯಾದ ದಟ್ಟಣೆ ಸಾಧ್ಯತೆ ಇದೆ. ಆದ್ದರಿಂದ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲು ಸಮಯ ಬೇಕಾಗುತ್ತದೆ ಎಂದು ಹೇಳಿದರು.ಯುದ್ಧ ತೈಲ ಕಂಪೆನಿಗಳ ಮೇಲೆ ದೊಡ್ಡ ರೀತಿಯಲ್ಲಿ ಪ್ರಭಾವ ಬೀರಿದೆ.

ಇಂಧನ ದರ ಏರಿಕೆಯ ಹೊರೆ ಹೊತ್ತುಕೊಳ್ಳುವ ಮೂಲಕ ಕೇಂದ್ರ ಸರಕಾರ ಸುಮಾರು 12,000 ಕೋಟಿ ರೂ. ವ್ಯಯಿಸಿದೆ. ಆದರೆ, ಯಾವುದೇ ರಾಜ್ಯ ಸರಕಾರ ಇಂಧನ ದರ ಹೆಚ್ಚಳದ ಸಂದರ್ಭದಲ್ಲಿ ತನ್ನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ ತಮ್ಮ ಆದಾಯವನ್ನು ಕಡಿತಗೊಳಿಸಿಲ್ಲ ಎಂದು ಸುರೇಶ್ ಗೋಪಿ ಹೇಳಿದರು.

- Advertisement -

Related news

error: Content is protected !!