Saturday, June 20, 2026
spot_imgspot_img
spot_imgspot_img

ವಿಟ್ಲ: ಅನ್ಯಕೋಮಿನ ಯುವಕರಿಂದ ಮಾರಣಾಂತಿಕ ಹಲ್ಲೆ ಪ್ರಕರಣ; ಮತ್ತಿಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ ವಿಟ್ಲ ಪೊಲೀಸರು

- Advertisement -
- Advertisement -

ವಿಟ್ಲ: ಕುದ್ದುಪದವಿನಲ್ಲಿ ಲಾರಿ ಒರೆಸಿಕೊಂಡು ಹೋದ ವಿಚಾರದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವಕನ ಮೇಲೆ ತಲವಾರು ಹಾಗೂ ರಾಡ್‌ನಿಂದ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಈಗಾಗಲೇ ವಿಟ್ಲ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಕೊಡಗು ಜಿಲ್ಲೆಯ ಮಹಮ್ಮದ್ ಶರೀಫ್, ಉಕ್ಕುಡ ದರ್ಬೆ ನಿವಾಸಿ ಸಾದಿಕ್ ಬಂಧಿತ ಆರೋಪಿಗಳಾಗಿದ್ದಾರೆ.

ಇದೀಗ ವಿಟ್ಲ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಉಕ್ಕುಡ ದರ್ಬೆ ನಿವಾಸಿ ಅಬ್ದುಲ್ ಸಲಂ(23) ಹಾಗೂ ಅಯೂಬ್ (24) ಬಂಧಿತ ಆರೋಪಿಗಳಾಗಿದ್ದಾರೆ.

ಏನಿದು ಪ್ರಕರಣ..!?
ರಕ್ಷಿತ್ ಎಂಬವರು ಬೈಕ್ ನಲ್ಲಿ ಅಡ್ಯನಡ್ಕದಿಂದ ಮೈರದಲ್ಲಿರುವ ತನ್ನ ಮನೆಗೆ ಹೋಗುವ ಸಂದರ್ಭ ಮೈರ, ಕರವೀರ ಬಸ್ ಸ್ಟಾಂಡ್ ಬಳಿ ರಕ್ಷಿತ್ ಎಂಬವರಿಗೆ ತಲವಾರು ಮತ್ತು ರಾಡ್ ಗಳಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಅಕ್ರ: ನಂಬ್ರ: 75/2022 ಕಲಂ: 504, 324, 143, 147, 148, 307 ಜೊತೆಗೆ 149 ಬಾಧಂಸಂ’ರಂತೆ ಪ್ರಕರಣ ದಾಖಲಾಗಿತ್ತು.

ಕೆ. ಮಹಮ್ಮದ್ ಶರೀಫ್, ಉಕ್ಕುಡ ದರ್ಬೆ ನಿವಾಸಿ ಸಾದಿಕ್

ಈ ಹಿಂದೆ ಬಂಧಿತ ಆರೋಪಿಗಳನ್ನು ಕೊಡಗು ಜಿಲ್ಲೆ ಸೋಮವಾರ ಪೇಟೆ ನಿವಾಸಿ ಕೆ. ಮಹಮ್ಮದ್ ಶರೀಫ್, ಉಕ್ಕುಡ ದರ್ಬೆ ನಿವಾಸಿ ಸಾದಿಕ್ ಎಂದು ಗುರುತಿಸಲಾಗಿದೆ.

ಇದೀಗ ತಲೆ ಮರೆಸಿಕೊಂಡಿದ್ದ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಟ್ಲ ಪೊಲೀಸರ ಈ ಕಾರ್ಯಚರಣೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

- Advertisement -

Related news

error: Content is protected !!