Tuesday, March 21, 2023
spot_imgspot_img
spot_imgspot_img

ವಿಟ್ಲ: ಕಾರು ಮತ್ತು ಬಾಕ್ಸೈಟ್‌ ಲಾರಿ ನಡುವೆ ಅಪಘಾತ…!!

- Advertisement -G L Acharya G L Acharya
- Advertisement -

ವಿಟ್ಲ : ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಘಟನೆ ವಿಟ್ಲ ಕನ್ಯಾನ ರಸ್ತೆಯ ಕಾಂತಡ್ಕ ಎಂಬಲ್ಲಿ ನಡೆದಿದೆ.

ಕಾರು ಮತ್ತು ಮಣ್ಣು ಕೊಂಡೊಯ್ಯುತ್ತಿದ್ದ ಬಾಕ್ಸೈಟ್‌ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕಾರಿನ ಒಂದು ಭಾಗ ಜಖಂಗೊಂಡಿದೆ.

ಉಕ್ಕುಡ- ಕನ್ಯಾನ ರಸ್ತೆಯಲ್ಲಿ 16 ಘನ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲದಿದ್ದರು ಮಣ್ಣು ಸಾಗಾಟದ ದಂಧೆ ಹೆಚ್ಚಾಗುತ್ತಿದ್ದು, ದಿನಕ್ಕೆ 50ಕ್ಕೂ ಹೆಚ್ಚು ಬಾಕ್ಸೈಟ್‌ ಲಾರಿಗಳು ವಿಟ್ಲ ಪರಿಸರದಲ್ಲಿ ಸಂಚರಿಸುತ್ತಿವೆ. ಬಾಕ್ಸೈಟ್ ಸಾಗಾಟದ ಯಮದೂತ ಲಾರಿಗಳು ಕನ್ಯಾನ-ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಯಾವ ಕ್ಷಣ ಯಾರ ಪ್ರಾಣ ಬಲಿ ಪಡೆಯುತ್ತೋ ಎಂಬ ಆತಂಕ ವ್ಯಕ್ತವಾಗಿದೆ. ದಿನದ 24ಗಂಟೆಯೂ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ 50-80ಟನ್‌ ತೂಕದ ಅಕ್ರಮ ಬಾಕ್ಸೈಟ್ ತುಂಬಿದ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ.

ಕಳೆದು ಹಲವು ಸಮಯಗಳಿಂದ ನೆರೆ ರಾಜ್ಯ ಕೇರಳದಿಂದ ಆಂಧ್ರ ಪ್ರದೇಶಕ್ಕೆ ಬೃಹತ್ ಲಾರಿಗಳಲ್ಲಿ ಬಾಕ್ಸೈಟ್‌ ಸಾಗಿಸುತ್ತಿದ್ದು ಜನರನ್ನು ನಿದ್ದೆಗಡೆಸುವಂತಾಗಿದೆ. ಈ ಲಾರಿ ಚಾಲಕರ ಅತಿ ವೇಗ, ನಿರ್ಲಕ್ಷ್ಯದ ಚಾಲನೆಯಿಂದ ಜನರು ಹೈರಾಣ ಆಗಿದ್ದಾರೆ. ಇತ್ತೀಚೆಗೆ ಅಪಘಾತ ಪ್ರಕರಣ ಹೆಚ್ಚಾಗಿ ಸಂಭವಿಸುತ್ತಿದ್ದು, ಈ ಬಗ್ಗೆ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದರೂ ಕಣ್ಣಿದ್ದೂ ಕುರುಡರಂತೆ ನಿರ್ಲಕ್ಷ್ಯ ವಹಿಸಿದ ಜಿಲ್ಲಾಡಳಿತ, ಆರ್‌ಟಿಒ, ಗಣಿ ಇಲಾಖೆಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಲವು ಮಾಧ್ಯಮಗಳು ವರದಿ ಪ್ರಕಟಿಸಿದರು ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡಿಲ್ಲ.

- Advertisement -

Related news

error: Content is protected !!