


ವಿಟ್ಲ: ಕೊಲ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ಮುಸ್ಲಿಂ ವರನು ಕೊರಗಜ್ಜನನ್ನು ಹೋಲುವ ವೇಷ ತೊಟ್ಟ ಘಟನೆಗೆ ಸಂಬAಧಿಸಿ ವಿಟ್ಲ ಠಾಣೆಯಲ್ಲಿ ಜ.7ರಂದು ಪ್ರಕರಣ ದಾಖಲಾಗಿತ್ತು. ಆದರೆ ಈವರೆಗೂ ಆರೋಪಿಯನ್ನು ಪೊಲೀಸರು ಬಂಧಿಸಲಿಲ್ಲ. ದೂರು ನೀಡಿ ದಿನಗಳೇ ಕಳೆದರೂ ಕೃತ್ಯ ಎಸಗಿದವರ ಬಂಧನವಾಗದ ಹಿನ್ನಲೆಯಲ್ಲಿ ಹಿಂದು ಜಾಗರಣ ವೇದಿಕೆಯೂ ವಿಟ್ಲ ಬಂದ್ ಗೆ ಕರೆ ನೀಡಿದೆ.
ಮಂಗಳವಾರ ಜ.11 ರಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ವರಗೆ ಸ್ವಯಂ ಪ್ರೇರಿತವಾಗಿ ವಿಟ್ಲ ಪಟ್ಟಣದಲ್ಲಿ ಬಂದ್ ಮಾಡುವಂತೆ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯೂ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಅಲ್ಲದೇ, ಅಂದು ಇದೇ ಅವಧಿಯಲ್ಲಿ ವಿಟ್ಲ ಪೇಟೆಯಲ್ಲಿ ಪ್ರತಿಭಟನಾ ಸಭೆ ಕೂಡ ನಡೆಯಲಿದೆ.
ಜ.6 ರಂದು ರಾತ್ರಿ ಸಾಲೆತ್ತೂರಿನ ಮದುಮಗಳ ಮನೆಯಲ್ಲಿ ಆಯೋಜಿಸಲಾಗಿದ್ದ ಔತಣ ಕೂಟದಲ್ಲಿ ಉಪ್ಪಳ ನಿವಾಸಿ ಹಾಗೂ ಪುತ್ತೂರಿನ ಬಸ್ಸು ನಿಲ್ದಾಣದ ಸಮೀಪ ಬಟ್ಟೆ ಅಂಗಡಿ ಹೊಂದಿರುವ ಉಮ್ರುಲ್ಲಾ ಬಾಷಿತ್ ಕೊರಗಜ್ಜನನ್ನು ಹೋಲುವ ವೇಷ ಧರಿಸಿ ಹಿಂದೂ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದು ಈ ಬಗ್ಗೆ ವರ ಅಜ್ಞಾತ ಸ್ಥಳದಿಂದ ಕ್ಷಮೆ ಕೂಡ ಯಾಚಿಸಿದ್ದ.


