Monday, September 26, 2022
spot_imgspot_img
spot_imgspot_img

ವಿಟ್ಲ: ದ.ಕ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ(ರಿ) ಮಂಗಳೂರು ಇದರ ಆಶ್ರಯದಲ್ಲಿ ಸಾರ್ವಜನಿಕ ಉಚಿತ ವೈದ್ಯಕೀಯ ಶಿಬಿರ

- Advertisement -G L Acharya G L Acharya
- Advertisement -

ವಿಟ್ಲ: ದ.ಕ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ(ರಿ) ಮಂಗಳೂರು, ಮರಾಟಿ ಮಹಿಳಾ ವೇದಿಕೆ ಮತ್ತು ಮರಾಟಿ ಯುವ ವೇದಿಕೆ ಇದರ ಆಶ್ರಯದಲ್ಲಿ ಫಾದರ್‌ ಮುಲ್ಲರ್‌ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ: 18-09-2022 ರವಿವಾರ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ವಿಟ್ಲ ಇಲ್ಲಿ ಸಾರ್ವಜನಿಕ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ವೇದಾವತಿ ಎನ್‌. ವಿಭಾಗೀಯ ಪ್ರಬಂಧಕರು ನ್ಯೂ ಇಂಡಿಯಾ ಕಂ.ಲಿ.ಮಂಗಳೂರು ಇಬವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಡಿ. ಶ್ರೀನಿವಾಸ್‌ ನಾಯ್ಕ ಪಡೀಲ್‌ ಇವರು ವಹಿಸಿದ್ದರು. ಗೋಪಾಲ್‌ ನಾಯ್ಕ್‌ ಮುಖ್ಯ ಅಧಿಕಾರಿ ವಿಟ್ಲ ಪಂಚಾಯತ್‌,ಕಿರಣ್‌ ಕುಮಾರ್‌, ಉಪಪ್ರಾಂಶುಪಾಲರು, ಯನ್‌.ಕೃಷ್ಣ ನಾಯ್ಕ್‌ ನೆಕ್ಕರೆಕಾಡು, ನವೀನ ನೆಕ್ಕರೆಕಾಡು ಉಪಸ್ಥಿತಿದ್ದರು.

ಶಿವಾಜಿ ಮಿತ್ರಮಂಡಳಿ, ಮರಾಟಿ ಯುವ ವೇದಿಕೆ ವಿಟ್ಲ, ಸುಂದರ ನಾಯ್ಕ್‌ ಬಜ್ಪೆ ಸಹಕಾರವನ್ನು ನೀಡಿದರು. ಮಹಾಲಿಂಗ ನಾಯ್ಕ್‌ ಆಸ್ಪಿನ್‌ವಾಲ್‌ ಸ್ವಾಗತಿಸಿದ್ದರು. ಮಹಾಲಿಂಗ ನಾಯ್ಕ್‌ ಶಿಕ್ಷಕರು ವಂದನಾರ್ಪಣೆ ಗೈದರು, ವನಿತಾ ಸುಂದರ್‌ ನಾಯ್ಕ್‌ ಕಾರ್ಯಕ್ರಮದ ನಿರೂಪಣೆ ಮಾಡಿದರು.

astr
- Advertisement -

Related news

error: Content is protected !!