Saturday, April 20, 2024
spot_imgspot_img
spot_imgspot_img

ವಿಟ್ಲ: ಇಡ್ಕಿದು ಅರ್ಕೆಚ್ಚಾರು, ನೇರ್ಲಾಜೆ ರಸ್ತೆ ಹಾನಿ; ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಶಾಸಕರು ಭರವಸೆ

- Advertisement -G L Acharya panikkar
- Advertisement -

ವಿಟ್ಲ: ಇಡ್ಕಿದು ಗ್ರಾಮದ ಅರ್ಕೆಚ್ಚಾರು, ನೇರ್ಲಾಜೆ ರಸ್ತೆಯು ಪ್ರಕೃತಿ ವಿಕೋಪದಿಂದಾಗಿ ಕುಸಿದಿದ್ದು, ರಸ್ತೆಯ ತಡೆಗೋಡೆಯು ಸಂಪೂರ್ಣವಾಗಿ ನೆಲಕ್ಕುರುಳಿದೆ. ಈ ಸಮಸ್ಯೆಯ ಬಗ್ಗೆ ವಿ.ಟಿವಿ ತಂಡ ವಿಸ್ಕೃತ ವರದಿ ಪ್ರಸಾರ ಮಾಡಿತ್ತು.

ಕಂಬಳಬೆಟ್ಟು, ಮಿತ್ತೂರು ಸಂಪರ್ಕ ರಸ್ತೆಯಾದ ಅರ್ಕೆಚ್ಚಾರು, ನೇರ್ಲಾಜೆ ಸೇರುವ ರಸ್ತೆಯಾಗಿದೆ. ಈ ಭಾಗದಲ್ಲಿ 100 ಕ್ಕೂ ಅಧಿಕ ಮನೆಗಳಿವೆ. ಸುಮಾರು ಸಮಯಗಳಿಂದ ಜನರು ರಸ್ತೆ ಕುಸಿತದಿಂದಾಗಿ ಕಷ್ಟ ಅನುಭವಿಸುತ್ತ ಇದ್ದಾರೆ. ಇತ್ತೀಚಿಗೆ ಗ್ರಾಮಸ್ಧರು ಒಟ್ಟಾಗಿ ಸೇರಿ ಇಡ್ಕಿದು ಗ್ರಾಮ ಪಂಚಾಯತ್‌ಗೆ ಮನವಿಯನ್ನ ನೀಡಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಓ, ಹಾಗೂ ಪಂಚಾಯತ್ ಸದಸ್ಯರು ಸ್ಧಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇಂದು ಶಾಸಕ ಸಂಜೀವ ಮಠಂದೂರು ಈ ಸಮಸ್ಯೆಯ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಣ್ಣ ನೀರಾವರಿ ಯೋಜನೆಯಡಿ ತಕ್ಷಣ ತಡೆಗೋಡೆ ನಿರ್ಮಾಣ, ನಂತರ ಕಾಂಕ್ರೀಟ್ ರಸ್ತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ದಯಾನಂದ ಶೆಟ್ಟಿ, ಉಜಿರೆಮಾರು ಸುರೇಶ್ ಮುಕ್ಕುಡ. ರಮೇಶ್ ಭಟ್ ಮಿತ್ತೂರು, ಪಂಚಾಯತ್ ಸದಸ್ಯರಾದ ಪದ್ಮನಾಭ ಸಪಲ್ಯ, ತಿಲಕ್‌ರಾಜ್ ಶೆಟ್ಟಿ, ಪುರುಷೋತ್ತಮ್ ಕೋಲ್ಪೆ, ಭಾಗೀರಥಿ, ಗೀತಾಂಜಲಿ, ಜಗದೀಶ್ ದೇವಸ್ಯ, ಹಿಮಕರ, ಉದಯ ಗೋವಿಂದ ಭಟ್, ಥಾಮಸ್ ಮಾಸ್ಕರೇನಸ್, ಹಮೀದ್, ಉಮ್ಮರ್, ಮನೋಜ್, ಗಣೇಶ್, ಗುಣಕರ ಸೇರಿದಂತೆ ಊರ ಸಮಸ್ತರು ಭಾಗಿಯಾಗಿದ್ದರು.

- Advertisement -

Related news

error: Content is protected !!