- Advertisement -




- Advertisement -
ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಮಹಿಳಾ ಘಟಕದ 2023-24 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಕ್ಷಯ ಸಮುದಾಯ ಭವನ ವಿಟ್ಲದಲ್ಲಿ ನಡೆಯಿತು.

ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷರಾಗಿ ಅಮಿತಾ ಗೋಪಾಲಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಬೇಬಿ ನಡುಮನೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ವೇದಾವತಿ ಮರುವಾಳ ಹಾಗೂ ಜತೆಕಾರ್ಯದರ್ಶಿಯಾಗಿ ಯಶೋಧಾ ಪಾಂಡೇಲುರವರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಜಲಜಾಕ್ಷಿ ಬಾಲಕೃಷ್ಣರವರರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ ) ಇದರ ಗೌರವಾಧ್ಯಕ್ಷ ಮೋಹನ್ ಕಾಯರ್‌ಮಾರ್, ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ವಿಶ್ವನಾಥ ವರಪ್ಪಾದೆ, ಖಜಾಂಜಿ ಈಶ್ವರಪ್ಪ ಗೌಡ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜಲಜಾಕ್ಷಿ, ಕಾರ್ಯದರ್ಶಿ ಜಯಲಕ್ಷ್ಮೀ, ಮಹೇಶ್ ಅಳಿಕೆ ಉಪಸ್ಥಿತರಿದ್ದರು.

- Advertisement -