Sunday, August 9, 2026
spot_imgspot_img
spot_imgspot_img

ವಿಟ್ಲ: ಶ್ರೀ ದುರ್ಗಾ ಕಲಾ ಸಂಘ (ರಿ) ಕರಿಂಕ ಆಶ್ರಯದಲ್ಲಿ ಆ.18ರಂದು ವಿಜೃಂಭಣೆಯ ಮೊಸರು ಕುಡಿಕೆ ಉತ್ಸವ

- Advertisement -
- Advertisement -

ವಿಟ್ಲ: ಶ್ರೀ ದುರ್ಗಾ ಕಲಾ ಸಂಘ (ರಿ) ಕರಿಂಕ ನೆಟ್ಲಮುಡ್ನೂರು-ಅನಂತಾಡಿ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 28ನೇ ವರ್ಷದ ಮೊಸರು ಕುಡಿಕೆ ಉತ್ಸವ18-08-2022ನೇ ಗುರುವಾರ ಕರಿಂಕದಲ್ಲಿ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಬೆಳಿಗ್ಗೆ 9ಗಂಟೆಗೆ ಜಯರಾಮ ಆಚಾರ್ಯ, ಗೌರವಾಧ್ಯಕ್ಷರು ಶ್ರೀ ದುರ್ಗಾ ಕಲಾ ಸಂಘ (ರಿ) ಕರಿಂಕ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ರಾಮಚಂದ್ರ ಭಟ್, ಪ್ರಧಾನ ಅರ್ಚಕರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕರಿಂಕ ಉದ್ಘಾಟಿಸಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಬಳಿಕ ಅಂಗನವಾಡಿ ಮಕ್ಕಳಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ , ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.

ಸಂಜೆ .ಬಿ. ನರೇಂದ್ರ ರೈ ನೆಲ್ತೊಟ್ಟು ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕರಿಂಕ ಇವರ ಸಭಾ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮೋಹನ್ ಗೌಡ ಕೊಂಕೋಣಕೋಡಿ ನಿವೃತ್ತ ಸೈನಿಕರು, ಗಣೇಶ್ ಪೂಜಾರಿ ಬಂಟ್ರಿಂಜ ಅಧ್ಯಕ್ಷರು ಗ್ರಾಮ ಪಂಚಾಯತ್ ಅನಂತಾಡಿ, ಸತೀಶ್ ಕೊಪ್ಪರಿಗೆ ಅಧ್ಯಕ್ಷರು ಗ್ರಾಮ ಪಂಚಾಯತ್ ನೆಟ್ಲಮುಡ್ನೂರು, ನಾಗೇಶ್ ಭಂಡಾರಿ ಕರಿಂಕ ಸಾಮಾಜಿಕ ಕಾರ್ಯಕರ್ತರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಧರ್ಣಪ್ಪ ಗೌಡ ಕರಿಂಕ, ಮುಖ್ಯ ಆರಕ್ಷಕ ಸಂಪ್ಯ ಪೊಲೀಸ್ ಠಾಣೆ ಬಹುಮಾನ ವಿತರಿಸಲಿದ್ದಾರೆ.

ವಿಶೇಷ ಸೂಚನೆ: ಮಾನವ ಪಿರಾಮಿಡ್ ಬಿಟ್ಟು ಉಳಿದ ತಂಡವನ್ನು ಸ್ಥಳದಲ್ಲೇ ರಚನೆ ಮಾಡಲಾಗುವುದು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!