- Advertisement -
- Advertisement -


ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಜಲಾವೃತವಾದ ಘಟನೆ ನಡೆದಿದೆ. ನೀರಿನ ಮಟ್ಟ ಏರಿಕೆಯಾಗುತ್ತಿರು ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ.

ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಜಲಾವೃತವಾಗಿದೆ. ಇದರಿಂದಾಗಿ ಈ ದಾರಿಯಾಗಿ ವಾಹನ ಸಂಚಾರಕ್ಕೆ ತೊಡಕಾಗಿದ್ದು, ವಾಹನಗಳು ಸುತ್ತಿ ಬಳಸಿ ಪ್ರಯಾಣ ಬೆಳೆಸುವಂತಾಗಿದೆ.

ಬೆಳಗ್ಗಿನಿಂದಲೇ ನೀರಿನ ಮಟ್ಟ ಏರುತ್ತಿದ್ದು, ಅಲ್ಪ ಹೊತ್ತು ಇಳಿಮುಖವಾಗಿತ್ತು. ಇದೀಗ ಮತ್ತೆ ಏರಿಕೆ ಕಂಡಿದ್ದು ನೀರು ರಸ್ತೆಗೆ ಬಂದಿದೆ. ಇದೀಗ ರಸ್ತೆಯ ಎರಡೂ ಕಡೆಗಳಲ್ಲಿ ಸ್ಥಳೀಯ ನಾಗರೀಕರು ಕಾವಲು ಕಾಯುತ್ತಿದ್ದು ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
- ಶಿವಸೇನೆ ಬಣಗಳು ತಮ್ಮದೇ ಚಿಹ್ನೆಗಳನ್ನು ಆಯ್ಕೆ ಮಾಡಿಕೊಂಡು ಸ್ವಂತ ಶಕ್ತಿಯ ಮೇಲೆ ಸ್ಪರ್ಧಿಸಲಿ: ಸುಪ್ರೀಂ ಕೋರ್ಟ್
- ವಿಟ್ಲದಲ್ಲಿ 45ನೇ ವರ್ಷದ ಗಣೇಶೋತ್ಸವದ ಶೋಭಾಯಾತ್ರೆ
- ಪುತ್ತೂರು: ಅಜಿತ್ ರೈ ಹೊಸಮನೆ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್
- ವಿಟ್ಲದಲ್ಲಿ ದ.ಕ. ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ
- ಬೆಳ್ತಂಗಡಿಯಲ್ಲಿ ಕಟ್ಟಡದ ಅಡಿಗೆ ಬಿದ್ದು ಕಡಬದ ಯುವಕ ಸಾವು



- Advertisement -








