- Advertisement -




- Advertisement -
ಕಲಬುರಗಿ: ಜೇವರ್ಗಿ ಪಟ್ಟಣದಲ್ಲಿನ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸಿದ್ದುಪ್ರಸಾದ್ ಶಹಾಪುರ (23) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಜೇವರ್ಗಿ ತಾಲೂಕಿನ ಬೀರಾಳ ಬಿ ಗ್ರಾಮದ ನಿವಾಸಿ. ಬಿಕಾಂ ಮುಗಿದು ಎರಡು ವರ್ಷ ಆಗಿದೆ. ಹಾಸ್ಟೆಲ್ ನ ಹಳೆಯ ವಿದ್ಯಾರ್ಥಿ ಆಗಿದ್ದ ಎನ್ನಲಾಗಿದೆ. ಆರ್ಥಿಕ ಸಮಸ್ಯೆ ಇರುವುದರಿಂದ ಹಾಸ್ಟೆಲ್ ನಲ್ಲಿ ವಾಸವಾಗಿದ್ದ.
ಕುಟುಂಬದ ಮೂಲಗಳ ಪ್ರಕಾರ ಸಾಲ ಮಾಡಿಕೊಂಡಿದ್ದ. ಮೂರು ದಿನಗಳ ಹಿಂದೆ ಸುಮಾರು ಮೂರು ಲಕ್ಷ ಸಾಲವನ್ನು ಕುಟುಂಬ ಸದಸ್ಯರು ಕಟ್ಟಿದ್ದರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
- Advertisement -