Thursday, February 2, 2023
spot_imgspot_img
spot_imgspot_img

ವೀರಕಂಭ: ಡಿ. 2 ರಂದು ಬಂಟರ ಸಂಘ ಕಲ್ಲಡ್ಕ ವಲಯ ಇದರ ವತಿಯಿಂದ ನೂತನ ಮನೆ ಬಂಟಾಶ್ರಯ ಇದರ ಹಸ್ತಾಂತರ, ಗೃಹಪ್ರವೇಶೋತ್ಸವ

- Advertisement -G L Acharya G L Acharya
- Advertisement -

ವಿಟ್ಲ: ಬಂಟರ ಸಂಘ ಕಲ್ಲಡ್ಕ ವಲಯದ ವತಿಯಿಂದ, ಜಾಗತಿಕ ಬಂಟರ ಸಂಘದ ಸಹಯೋಗದಲ್ಲಿ ವೀರಕಂಭ ಗ್ರಾಮದ ಪಾತ್ರೆಜಾಲು ಗಣೇಶ್ ಶೆಟ್ಟಿಯವರಿಗೆ ಒಂದು ಮನೆಯನ್ನು ನಿರ್ಮಾಣ ಮಾಡಿ ಕೊಡುವ ಯೋಜನೆ ಅಂತಿಮ ಹಂತದಲ್ಲಿದ್ದು ದಿನಾಂಕ 02-12-2022 ಶುಕ್ರವಾರ ಗೃಹ ಪ್ರವೇಶ ಕಾರ್ಯಕ್ರಮ ನಡೆಯಲಿದೆ.

ನೂತನ ಮನೆಯನ್ನು ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಬಾವ ಹರೀಶ್ ಶೆಟ್ಟಿ ಯವರು ಉದ್ಘಾಟಿಸಲಿದ್ದಾರೆ. ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್‍ ರೈ ಮಾಲಾಡಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಮುಂಬೈ ಭವಾನಿ ಶಿಪ್ಪಿಂಗ್ ಚೇರ್‌ಮೆನ್ ಕೆ.ಡಿ ಶೆಟ್ಟಿ ದಾಖಲೆ ಪತ್ರ ಹಸ್ತಾಂತರಿಸಲಿದ್ದಾರೆ. ಕಲ್ಲಡ್ಕ ವಲಯ ಬಂಟರ ಸಂಘದ ಅಧ್ಯಕ್ಷ ಕೆ.ಪದ್ಮನಾಭ ರೈ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪಟ್ಲ ಫೌಂಡೇಷನ್ ನ ಗೌರವಾಧ್ಯಕ್ಷರಾದ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಬಂಟವಾಳ ತಾ.ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು, ಬಂಟರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಮಾರ್ಲ, ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷ ರಮಾ ಎಸ್.ಭಂಡಾರಿ, ಜೊತೆ ಕೋಶಾಧಿಕಾರಿ ಪ್ರತಿಭಾ ಎ. ರೈ, ಮಹಿಳಾ ವಿಭಾಗದ ಕೋಶಾಧಿಕಾರಿ ಸುಜಾತ ಪಿ.ರೈ, ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ, ಸುರತ್ಕಲ್ ಮಾತಾ ಡೆವೆಲಪರ್‍ಸ್ ನ ಸಂತೋಷ್ ಶೆಟ್ಟಿ ಅರೆಬೆಟ್ಟು, ಮಂಗಳೂರು ಶ್ರೀ ದುರ್ಗಾ ಫೆಸಿಲಿಟೀಸ್ & ಮ್ಯಾನೇಜ್‌ಮೆಂಟ್‌ ನ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಕೆಲಿಂಜ ಶ್ರೀ ಉಳ್ಳಾಲ್ತಿ ದೇವಸ್ಥಾನದ ಮುಖ್ಯಸ್ಥ ಗಿರಿಧರ್‍ ರೈ ಬೆಂಜೆಂತಿಮಾರ್‍ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆಯ ನಿರ್ಮಾಣಕ್ಕೆ ಮತ್ತು ಕಾರ್ಯಕ್ರಮಕ್ಕೆ ಅಂದಾಜು 7,25,000/- ಖರ್ಚು ಆಗುವುದು.

- Advertisement -

Related news

error: Content is protected !!