ಬೆಂಗಳೂರು: ಸಂಪುಟ ವಿಸ್ತರಣೆಯ ಕಸರತ್ತಿನಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಶಿವಾನಂದ ಸರ್ಕಲ್ ಬಳಿಯಿರುವ ಜನಾರ್ದನ ಹೋಟೆಲ್ನಲ್ಲಿ ದೋಸೆ ಸವಿದು ಆತ್ಮೀಯರೊಂದಿಗೆ ಚರ್ಚಿಸಿದರು.

ಬಿಎಸ್ವೈ ಜೊತೆ ಕಂದಾಯ ಸಚಿವ ಆರ್.ಅಶೋಕ್ ಕೂಡ ಇದ್ದರು.ಬಳಿಕ ಕಾವೇರಿ ನಿವಾಸದಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ.. 8 ಜನರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಯಾರು ಆ 8 ಜನ ಎಂಬ ಪಟ್ಟಿಯನ್ನು ತಿಳಿಸುತ್ತೇನೆ. ಈಗಾಗಲೇ ಕೆಲವರು ಖಚಿತ ಆಗಿರೋರಿಗೆ ತಿಳಿಸಿದ್ದೇನೆ.

ಇನ್ನೂ ಕೆಲವರು ಸಣ್ಣಪುಟ್ಟ ವ್ಯತ್ಯಾಸಗಳಿಂದ ಖಚಿತ ಆಗಬೇಕು. ಹೀಗಾಗಿ ಅಂತಿಮವಾಗಿ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡುತ್ತೇನೆ. ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
