Thursday, July 3, 2025
spot_imgspot_img
spot_imgspot_img

ಸಚಿವರಾದ ಬಳಿಕ ಮೊದಲ ಬಾರಿಗೆ ಪುತ್ತೂರಿಗೆ ಭೇಟಿ ನೀಡಿದ ಎಸ್.ಅಂಗಾರ!

- Advertisement -
- Advertisement -

ಪುತ್ತೂರು: ಸತತ ಆರನೇ ಬಾರಿಗೆ ಸುಳ್ಯದ ಶಾಸಕರಾಗಿ ಚುನಾಯಿತರಾಗಿ, ರಾಜ್ಯ ಸಚಿವ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಚಿವ ಎಸ್. ಅಂಗಾರರವರು ಪ್ರಥಮ ಬಾರಿಗೆ ಪುತ್ತೂರಿಗೆ ಭೇಟಿ ನೀಡಿದರು.

ಮಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ ಅವರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ‌ ವಿಶೇಷ ಪೂಜೆ ಸಲ್ಲಿಸಿದರು. ಬೆಂಗಳೂರಿನಿಂದ ವಿಮಾನದಲ್ಲಿ ಆಗಮಿಸಿದ ಸಚಿವ ಅಂಗಾರರವರು ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಿಂದ ನೇರವಾಗಿ ಕದ್ರಿ ಮಂಜುನಾಥ ದೇವಸ್ಥಾನ ಭೇಟಿ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಂದ ಸಂಘನಿಕೇತನ, ಬಿಜೆಪಿ ಜಿಲ್ಲಾ ಕಚೇರಿ, ಕಲ್ಲಡ್ಕ ರಾಮ ಮಂದಿರ ಭೇಟಿ ನೀಡಿದ ಅವರು ಬಳಿಕ ಪುತ್ತೂರಿಗೆ ಭೇಟಿ ನೀಡಿದರು.

ಸಹಾಯಕ ಆಯುಕ್ತರು ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಡಾ.ಯತೀಶ್ ಉಳ್ಳಾಲ್, ಶಾಸಕ‌ ಸಂಜೀವ ಮಠಂದೂರು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹರಿಪ್ರಸಾದ್ ಯಾದವ್ ಮೊದಲಾದವರು ಹೂ ಹಾರ, ಶಾಲು, ಹೂಗುಚ್ಚ ನೀಡಿ ಸ್ವಾಗತಿಸಿದರು. ಅರ್ಚಕ ವಸಂತ ಕೆದಿಲಾಯ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿ ಗೌರವಿಸಿದರು.

- Advertisement -

Related news

error: Content is protected !!