Tuesday, June 16, 2026
spot_imgspot_img
spot_imgspot_img

ಪುತ್ತೂರು: ಕೆಯ್ಯೂರಿನಲ್ಲಿ ಅನುಮಾನಾಸ್ಪದವಾಗಿ ಆಂಧ್ರಪ್ರದೇಶದ ನೋಂದಣಿಯ ಕಾರು ಓಡಾಟ ವಿಚಾರ; ಮಾದಕ ದ್ರವ್ಯ ಸೇವನೆ ದೃಢ; ಚಾಲಕನ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು: ಕೆಯ್ಯೂರು ಎರಕ್ಕಳ ಎಂಬಲ್ಲಿ ಆಂಧ್ರಪ್ರದೇಶದ ನೋಂದಣಿಯ ಸ್ಕೋರ್ಪಿಯೊ ಕಾರೊಂದು ಅನುಮಾನಸ್ಪದವಾಗಿ ಓಡಾಡುತ್ತಿದೆ ಎಂಬ ಬಗ್ಗೆ ಸಾರ್ವಜನಿಕರ ಮಾಹಿತಿ ನೀಡಿದ್ದು, ಈ ಹಿನ್ನೆಲೆ ಕಾರು ಚಾಲಕನನ್ನು ವಿಚಾರಿಸಿದ ಸಂಪ್ಯ ಪೊಲೀಸರು ಚಾಲಕ ಮಾದಕ ದ್ರವ್ಯ ಸೇವನೆ ಮಾಡಿರುವ ಶಂಕೆಯಿಂದ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಘಟನೆ ನಡೆದಿದೆ.

ಕಾರು ಚಾಲಕ ಮಾದಕ ವಸ್ತು ಸೇವೆ ಮಾಡಿರುವುದಾಗಿ ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಂತೆ ಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬ ತಾಲೂಕಿನ ಪೆರಾಬೆ ಕೋಚಕಟ್ಟೆ ನಿವಾಸಿ ಇಬ್ರಾಹಿಂ ಮುಸ್ಲಿಯಾರ್ ಅವರ ಪುತ್ರ ಮುಹಾದ್ ಪ್ರಾಯ (30) ಎಂಬಾತ ಮಾದಕ ವಸ್ತು ಗಾಂಜಾ ಸೇವಿಸಿರುವುದಾಗಿ ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಿದ್ದು. ಆರೋಪಿ ವಿರುದ್ಧ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!