Tuesday, December 3, 2024
spot_imgspot_img
spot_imgspot_img

ಸಹಕಾರ ಕ್ಷೇತ್ರ, ಕೃಷಿ ಕ್ಷೇತ್ರ, ಹೈನುಗಾರಿಕಾ ಕ್ಷೇತ್ರದ ಮಹಾನ್ ದಿಗ್ಗಜ ಕೊಂಕೋಡಿ ಪದ್ಮನಾಭ

- Advertisement -
- Advertisement -

ಬಂಟ್ವಾಳ ತಾಲೂಕಿನ ಭತ್ತದ ಕೃಷಿಗಾಗಿ ಪ್ರತಿಷ್ಠಿತ ಚಿನ್ನದ ಪದಕ ವಿಜೇತರು

ಇಡ್ಕಿದು ಗ್ರಾಮದ ಹಿರಿಮೆಯನ್ನು ಹೆಚ್ಚಿಸಿದ ಮಹಾನ್ ಸಾಧಕ

ಬೆಳೆಯುವ ಕೃಷಿಯಲ್ಲಿ ಪ್ರೀತಿ, ಮಾಡುವ ಕಾಯಕದಲ್ಲಿ ಶ್ರಮ. ದಣಿವರಿಯದ ಅವಿರತ ದುಡಿಮೆ. ಹಲವು ಜವಬ್ಧಾರಿಗಳನ್ನು ಹೊತ್ತು ನಿಭಾಯಿಸಿ ಮುನ್ನಡೆಸುವ ಛಲ… ತಾನು ಮಾಡುವ ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಇದ್ದಲ್ಲಿ ಆ ವೃತ್ತಿ ತನ್ನನ್ನು ಎಂದಿಗೂ ಸೋಲಲು ಬಿಡುವುದಿಲ್ಲ. ಆತನ ಬದುಕಲ್ಲಿ ಸದಾ ಗೆಲುವಿನ ನಗೆ ಚಿಮ್ಮುತ್ತಲೇ ಇರುತ್ತದೆ. ಇಂಥ ಗೆಲುವಿನ ಸಾಧಕ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕೊಂಕೋಡಿ ಪದ್ಮನಾಭರವರು.

ಇಡ್ಕಿದು ಗ್ರಾಮದ ಕೊಂಕೋಡಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಇವರು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಕ್ರಿಯ ಕಾರ್ಯಕರ್ತರಾಗಿ, ಜೊತೆಗೆ ಸಹಕಾರ ಕ್ಷೇತ್ರ, ಕೃಷಿ ಕ್ಷೇತ್ರ, ಹೈನುಗಾರಿಕೆ, ಸಮಾಜ ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ಅಧ್ಯಕ್ಷರಾಗಿ, ಸ್ಥಾಪಕಾಧ್ಯಕ್ಷರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿ, ಹಲವು ಸಾಧನೆಗಳ ಮೂಲಕ ಇಡ್ಕಿದು ಗ್ರಾಮದ ಹಿರಿಮೆಯನ್ನು ಗಗನಕ್ಕೇರಿಸಿದ ಸಾಧಕ. ಹಳ್ಳಿಯಿಂದ ದಿಲ್ಲಿವರೆಗೂ ಹಲವು ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಇವರನ್ನು ಮಹಾನ್ ದಿಗ್ಗಜರೆಂದೇ ಕರೆಯುತ್ತಾರೆ.
ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅರೆಕಾ ಮತ್ತು ಕೊಕೊ ಬೆಳೆಗಾರರ ಕ್ಷೇತ್ರದಲ್ಲಿ – CAMPCO ಎಂದು ಜನಪ್ರಿಯವಾಗಿರುವ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ ಲಿಮಿಟೆಡ್ ಅಧ್ಯಕ್ಷರು ಕೊಂಕೋಡಿ ಪದ್ಮನಾಭರವರು…

ಕಳೆದ ೪೫ ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಕೇಂದ್ರ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾಗಿ ಇಡ್ಕಿದು ಹಾಲು ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರಾಗಿ, ದಕ್ಷಿಣ ಕೆನರಾ ಸೆಂಟ್ರಲ್ ಕೋಆಪರೇಟಿವ್ ಹೋಲ್‌ಸೇಲ್ ಸ್ಟೋರ್ಸ್ ಲಿಮಿಟೆಡ್, ಮಂಗಳೂರು ಇದರ ಮಾಜಿ ಅಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಸಹಕಾರಿ ಯೂನಿಯನ್‌ನ ಮಾಜಿ ನಿರ್ದೇಶಕರಾಗಿ, ಭಾರತಿ ಟೂರಿಸಂ ಡೆವಲಪ್‌ಮೆಂಟ್ ಕೋಆಪರೇಟಿವ್ ಲಿಮಿಟೆಡ್‌ನ ಸ್ಥಾಪಕ ಅಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ಅರೆಕಾ ಮಾರ್ಕೆಟಿಂಗ್ ಕೋಆಪರೇಟಿವ್ ಸೊಸೈಟೀಸ್ ಫೆಡರೇಶನ್, ಶಿವಮೊಗ್ಗ ಇದರ ಸ್ಥಾಪಕ ಅಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ, ಸಹಕಾರ ಭಾರತಿಯ ಸದಸ್ಯರಾಗಿ, ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ, ಸಹಕಾರ ಭಾರತಿ ಮತ್ತು ಅದರ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಜವಬ್ಧಾರಿಗಳನ್ನು ಹೊತ್ತು ಪರಿಪೂರ್ಣವಾಗಿ ನಿಭಾಯಿಸಿ ಸಹಕಾರ ಕ್ಷೇತ್ರವನ್ನು ಯಶಸ್ವಿಗೊಳಿಸಿದ ಮಹಾನ್ ಅಭಿವೃದ್ಧಿಕಾರ ಕೊಂಕೋಡಿ ಪದ್ಮನಾಭರವರು.

ಜೊತೆಗೆ ಕೃಷಿ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ತಮ್ಮ ಪರಿಸರದಲ್ಲಿ ಕೃಷಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮವಹಿಸಿದ ಶ್ರಮಿಕನೂ ಹೌದು. ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ಬಂಟ್ವಾಳ ತಾಲೂಕಿನ ಭತ್ತದ ಕೃಷಿಗಾಗಿ ಪ್ರತಿಷ್ಠಿತ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ. ಜೊತೆಗೆ ಹೈನುಗಾರಿಕೆಯಲ್ಲೂ ಆಸಕ್ತಿ ಇರುವ ಇವರು ತನ್ನ ಡೈರಿಯಲ್ಲಿ ೫೦ ಲೀಟರ್‌ಗಿಂತಲೂ ಹೆಚ್ಚು ಹಾಲನ್ನು ಉತ್ಪಾದಿಸುವ ಮೂಲಕ ಹೈನುಗಾರಿಕ ಕ್ಷೇತ್ರದಲ್ಲಿ ಮಾದರಿ ಎನಿಸಿಕೊಂಡಿದ್ದಾರೆ.
ಪ್ರಸ್ತುತ ಪತ್ನಿ ಮತ್ತು ೨ ಗಂಡುಮಕ್ಕಳೊAದಿಗೆ ಸುಖೀ ಸಂಸಾರಿಯಾಗಿರುವ ಇವರು ನನ್ನ ಸುತ್ತಮುತ್ತಲಿನ ಪ್ರದೇಶಗಳ ಅಸಹಾಯಕರ, ಗ್ರಾಮಸ್ಥರ ಸೇವೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊಂಕೋಡಿ ಪದ್ಮನಾಭರವರ ಸಹಕಾರ ಕ್ಷೇತ್ರದ ಸಾಧನೆಯನ್ನು ಗುರುತಿಸಿ ನೀಡಲ್ಪಡುವ ಅತ್ಯುನ್ನತ ಗೌರವ ೨೦೨೨ ನೇ ಸಾಲಿನ “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ಕರಾವಳಿ ಉತ್ಸವ ಮೈದಾನದ ಮಂಗಳೂರಿನಲ್ಲಿ ನಡೆಯಿತು. ಸಹಕಾರ ರತ್ನ ಪ್ರಶಸ್ತಿ ಲಭಿಸಿದ ನಿಮಗೆ ವಿಟಿವಿ ಮಾಧ್ಯಮ ಅಭಿನಂದನೆ ಸಲ್ಲಿಸುತ್ತದೆ.

- Advertisement -

Related news

error: Content is protected !!