Saturday, April 20, 2024
spot_imgspot_img
spot_imgspot_img

ವಲಯಾಧ್ಯಕ್ಷರಿಗಾಗಿ ಒಂದು ದಿನದ “IMPETUS-2020” ವರ್ಕ್ ಶಾಪ್ ( ವಲಯಾಧ್ಯಕ್ಷರ ಕಾರ್ಯಾಗಾರ)

- Advertisement -G L Acharya panikkar
- Advertisement -

ಮಂಗಳೂರು: ಲಯನ್ಸ್ ಜಿಲ್ಲೆ 317 ಡಿ ಯು ವತಿಯಿಂದ ಲಯನ್ಸ್ ಜಿಲ್ಲೆ ಒಂದು ದಿನದ “IMPETUS-2020” ವರ್ಕ್ ಶಾಪ್ ( ವಲಯಾಧ್ಯಕ್ಷರ ಕಾರ್ಯಾಗಾರ) ಜಿಲ್ಲಾ ಗವರ್ನರ್ ಡಾ| ಗೀತಾಪ್ರಕಾಶ್ ಎ.ಅವರ ನೇತೃತ್ವದಲ್ಲಿ ಮಂಗಳೂರಿನ ದೀಪಾ ಹೋಟೆಲ್ ನಲ್ಲಿ ನಡೆಯಿತು.


ಜಿಎಲ್ ಟಿ ಸಂಯೋಜಕಿ ರಜಿನಾ ದಿನೇಶ್ ಅಧ್ಯಕ್ಷತೆ ವಹಿಸಿದ್ದರು.ಮಲ್ಟಿಪಲ್ ಜಿಲ್ಲೆ 317 ರ ಅಧಿನಾಯಕ ಮಲ್ಟಿಪಲ್ ಅಧ್ಯಕ್ಷ ನಾಗರಾಜ ವಿ ಬೈರಿ ಉದ್ಘಾಟಿಸಿ ,ಕೋವಿಡ್ 19 ಕಾಲದಲ್ಲೂ ಜಿಲ್ಲೆ 317 D ಯ ಗವರ್ನರ್ ಅವರ ಮಾರ್ಗದರ್ಶನದಲ್ಲಿ ಈ ವರೆಗೆ ನಡೆಸಿಕೊಂಡು ಬಂದ ಆಡಳಿತಾತ್ಮಕ ಹಾಗೂ ಸೇವಾಚಟುವಟಿಕೆಗಳು,ವರ್ಚುವಲ್ ಝೂಮ್ ಮುಖೇನ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭ ಪದಗ್ರಹಣ ಸಮಿತಿ ಅಧ್ಯಕ್ಷ ಪ್ರವೀಣ ಶೆಟ್ಟಿ ಅವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನಡೆದುದನ್ನು ಸ್ಮರಿಸಿಕೊಂಡು ಅಭಿನಂದಿಸಿದರು.


“ಕಸದಿಂದ ರಸ ” ‌ ವಿನೂತನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಜಿಲ್ಲೆ 317 A ಪೂರ್ವಗವರ್ನರ್ ಪ್ರೇಮನಾಥ ಅವರು “THE ROLE AND RESPONSIBILITIES OF ZONE CHAIRPERSON & ZONE GOAL SETTING AND ACTION PLANNING” ನಡೆಸಿಕೊಟ್ಟರು.
ಲಯನ್ಸ್ ಜಿಲ್ಲೆ 317 A ಯ ಪೂರ್ವಗವರ್ನರ್ ದಿವಾಕರ್ ಅವರು “PROBLEM SOLVING” ವಿಷಯವನ್ನು ಮಾಹಿತಿಯನ್ನು ನೀಡಿದರು.


ಲಯನ್ಸ್ ಜಿಲ್ಲೆ 317 A ಯ ಪೂರ್ವಗವರ್ನರ್ ಹಾಗೂ ಸಂಪನ್ಮೂಲವ್ಯಕ್ತಿ ವಿಜಯಕುಮಾರ ಶೆಟ್ಟಿ ಅವರು “” ASSESSING CLUB HEALTH”ಬಗ್ಗೆ ತಿಳಿಸಿದರು. 317 A ಯ ಪೂರ್ವಗವರ್ನರ್ ಮುನಿಯಪ್ಪ ಉಪಸ್ಥಿತರಿದ್ದರು.


ಪ್ರಥಮ ಉಪಗವರ್ನರ್ ವಸಂತಕುಮಾರ ಶೆಟ್ಟಿ, ದ್ವಿತೀಯ ಉಪಗವರ್ನರ್ ಸಂಜಿತ್ ಶೆಟ್ಟಿ ಉಪಸ್ಥಿತರಿದ್ದರು. ಸಂಪುಟ ಕಾರ್ಯದರ್ಶಿ ಸಿ.ಪಿ.ದಿನೇಶ್,ಸಂಪುಟ ಕೋಶಾಧಿಕಾರಿ ಮಹಮ್ಮದ್ ಇಕ್ಬಾಲ್,ಸಾರ್ವಜನಿಕ ಸಂಪರ್ಕಾಧಿಕಾರಿ ವಿಟ್ಲ ಮಂಗೇಶ ಭಟ್,ಜಿಲ್ಲಾ ಗವರ್ನರ್ಸ್ ಸಂಯೋಜಕಿ ಅರುಣಾ ಯಸ್ ಶೆಟ್ಟಿ, ಜಿಲ್ಲಾ ಗವರ್ನರ್ಸ್ ಅಡಿಶನಲ್ ಸಂಯೋಜಕ ವಿ.ಗಂಗಾಧರ್,ಜಿ ಯಸ್ ಟಿ ಸಂಯೋಜಕ ಪ್ರವೀಣ ಶೆಟ್ಟಿ,ಜಿಎಂ ಟಿ ಸಂಯೋಜಕ ಮೋಹನದಾಸ ಶೆಟ್ಟಿ,GAT ಮೋಟಿವೇಟರ್ ಮೆಲ್ವಿನ್ ಡಿ ಸೋಜ GLT ಜಿಲ್ಲಾಧ್ಯಕ್ಷ ಸತೀಶನ್, ಜೊತೆಗಿದ್ದರು.ವಲಯಾಧ್ಯಕ್ಷ ಕೇಶವ ಪೂಜಾರಿ ಹಾಗೂ GLT ಜಿಲ್ಲಾಧ್ಯಕ್ಷೆ ಸೌಮ್ಯ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.ವಲಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವರ್ಕ್ ಶಾಪ್ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು.ಜಿಲ್ಲಾ ಗವರ್ನರ್ ಅವರು ವಲಯಾಧ್ಯಕ್ಷರುಗಳಿಗೆ ಪ್ರಮಾಣಪತ್ರ ವಿತರಿಸಿದರು.ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ ವಂದಿಸಿದರು.

- Advertisement -

Related news

error: Content is protected !!