Sunday, July 26, 2026
spot_imgspot_img
spot_imgspot_img

ಸಿಡಿಲು ಬಡಿದರೂ ಪವಾಡ ಸದೃಶ್ಯವಾಗಿ ಬದುಕಿ ಬಂದ ರೈತ!

- Advertisement -
- Advertisement -

ವಿಜಯನಗರ: ರೈತರೊಬ್ಬರಿಗೆ ಸಿಡಿಲು ಬಡಿದರೂ ಕೂದಲೆಳೆಯ ಅಂತರದಲ್ಲಿ ಪಾರಾಗಿ, ಬದುಕಿ ಬಂದಿರುವ ಘಟನೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಸಮೀಪದ ಗರಗ ಗ್ರಾಮದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಮರಿಯಮ್ಮನ ಹಳ್ಳಿ ಹತ್ತಿರದ ಗರಗ ಗ್ರಾಮದ ರೈತ ಮೇದಾರ ನಿಂಗಪ್ಪ ಎಂಬುವರು ಜಮೀನಿನ ಕೆಲಸಕ್ಕೆ ಹೊಲಕ್ಕೆ ತೆರಳಿದ್ದರು. ಸಂಜೆ ಮನೆಗೆ ಹಿಂದಿರುಗುವ ಸಂದರ್ಭದಲ್ಲಿಯೇ ಜೋರು ಮಳೆ ಆರಂಭಗೊಂಡಿದೆ.

ಇದರ ನಡುವೆ ಮನೆಗೆ ಬರುವ ಮಾರ್ಗಮಧ್ಯೆಯೇ ಮಳೆಯ ಜೊತೆಗೆ ಬಂದಂತ ಸಿಡಿಲು ಅವರಿಗೆ ಹೊಡೆದಿದೆ. ಇದರಿಂದಾಗಿ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನು ಪರಿಶೀಲಿಸಿದಂತ ವೈದ್ಯರು ಹೊಲಿಗೆ ಹಾಕಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ ಅವರು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Related news

error: Content is protected !!