Tuesday, July 1, 2025
spot_imgspot_img
spot_imgspot_img

ಸುಬ್ರಹ್ಮಣ್ಯ: ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕೂತ್ಕುಂಜ ಗ್ರಾಮದ ಮನೆಯೊಂದರಲ್ಲಿ ವ್ಯಕ್ತಿಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಪುತ್ಯ ದಿ| ಶಿವಪ್ಪ ಗೌಡರ ಪುತ್ರ ತಿರುಮಲೇಶ್ವರ (41) ಎಂದು ಗುರುತಿಸಲಾಗಿದೆ. ಮೃತರ ತಾಯಿ ಮತ್ತು ಸಹೋದರ ಕೆಲ ಸಮಯದ ಹಿಂದಷ್ಟೇ ಜಾಗ ಮಾರಾಟ ಮಾಡಿ ಕಡಬದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಗುರುವಾರ ತಿರುಮಲೇಶ್ವರ ಕರೆ ಸ್ವೀಕರಿಸದ ಕಾರಣ ಸಹೋದರ ಮನೆಗೆ ಆಗಮಿಸಿದ್ದರು. ಆ ವೇಳೆ ಮಲಗಿದ ಸ್ಥಿತಿಯಲ್ಲಿ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಶವ ಭಾಗಶಃ ಕೊಳೆತು ಹೋಗಿದ್ದು, ಕೆಲ ದಿನಗಳ ಹಿಂದೆಯೇ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಬಳಿಕ ಸಹೋದರ ಕೂಡಲೇ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತಿರುಮಲೇಶ್ವರ ಅವರ ಪತ್ನಿ ತಮ್ಮ ಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದು, ಮನೆಯಲ್ಲಿ ಅವರು ಒಬ್ಬರೇ ಕಳೆದ ಕೆಲವು ವರ್ಷಗಳಿಂದ ವಾಸಿಸುತ್ತಿದ್ದರು ಎಂಬುದಾಗಿ ಮಾಹಿತಿ ಲಭ್ಯವಾಗಿದೆ

ಕುಡಿತದ ಚಟ ಹೊಂದಿದ್ದ ಅವರು ಅನಾರೋಗ್ಯಕ್ಕೊಳಗಾಗಿ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಇವರ ಸಹೋದರ ರಮೇಶ್‌ (39) ಅವರು ಕಳೆದ ಎಪ್ರಿಲ್ 15ರಂದು ಮೃತಪಟ್ಟಿದ್ದು, ಅವರು ಕೂಡಾ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಕಾರಣ ಸಾವನ್ನಪ್ಪಿ ಕೆಲ ದಿನಗಳವರೆಗೆ ಯಾರಿಗೂ ವಿಷಯ ತಿಳಿದಿರಲಿಲ್ಲ. ಇದೀಗ ತಿರುಮಲೇಶ್ವರ ಕೂಡಾ ಅದೇ ರೀತಿ ಸಾವನ್ನಪ್ಪಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!