- Advertisement -
- Advertisement -
ಸುಳ್ಯ : ಗೂನಡ್ಕ ಸಜ್ಜನ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ವಸಂತ ಎಂಬವರು ಅಲ್ಲಿ ಮದುವೆ ಕಾರ್ಯಕ್ರಮ ಬಂದಿದ್ದ ಮಹಿಳೆಯೋರ್ವಳಿಗೆ ಸ್ಕ್ರೂ ಡ್ರೈವ್ ನಿಂದ ಇರಿಯಲು ಯತ್ನಿಸಿದರೆಂದೂ ಆ ವೇಳೆ ಆ ಮಹಿಳೆ ತಪ್ಪಿಸಿಕೊಂಡರೆಂದು ಹೇಳಲಾಗಿದೆ.
ಅದನ್ನು ಕಂಡ ಮದುವೆ ಸಭಾಂಗಣದಲ್ಲಿ ಸೇರಿದ ಜನರು ವಸಂತರನ್ನು ತಡೆದು ಹೊರಗೆ ಎಳೆದು ತಂದರೆಂದು ತಿಳಿದುಬಂದಿದೆ.
ಆ ಮಹಿಳೆಗೆ ಬೈಯುತ್ತಾ ಆ ಯುವಕ ಅಲ್ಲಿಂದ ತೆರಳಿ ಪಕ್ಕದ ತೋಟದ ಬಳಿ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆಂದೂ ಇದನ್ನು ಗಮನಿಸಿದ ಸ್ಥಳೀಯರು ವಸಂತರನ್ನು ಸುಳ್ಯ, ಅಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರ ಇನ್ನಷ್ಟೆ ತಿಳಿದುಬರಬೇಕಾಗಿದೆ.
- Advertisement -