Sunday, June 29, 2025
spot_imgspot_img
spot_imgspot_img

ಸುಳ್ಯ: ಮಾರುತಿ ಕಾರು ಮತ್ತು ಸ್ಕೂಟಿ ಡಿಕ್ಕಿ; ಅಣ್ಣ ಸ್ಥಳದಲ್ಲೇ ಸಾವು ತಂಗಿ ಗಂಭೀರ

- Advertisement -
- Advertisement -

ಸುಳ್ಯ: ಎಲಿಮಲೆಯ ಸಮೀಪದ ಜಬಳೆ ಬಳಿ ಮಾರುತಿ ಕಾರು ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಅಣ್ಣ ಮೃತಪಟ್ಟು ತಂಗಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೃತಪಟ್ಟ ಯುವಕ ನಿಶಾಂತ್‌ ಬಾಜಿನಡ್ಕ ಎಂದು ತಿಳಿದು ಬಂದಿದೆ.

ನಿಶಾಂತ್ ತಂಗಿಯನ್ನು ಕರೆದುಕೊಂಡು ಎಲಿಮಲೆಯಿಂದ ಮನೆಗೆ ಹೋಗುತ್ತಿದ್ದಾಗ ಸುಳ್ಯ, ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬಾಲಕ ಸ್ಥಳದಲ್ಲಿಯೇ ಮೃತಪಟ್ಟರೆ, ತೀವ್ರ ಗಾಯಗೊಂಡ ನಿಶಾಂತ್ ನ ತಂಗಿ ಮೋಕ್ಷಳನ್ನು, ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ.

ಬಾಜಿನಡ್ಕ, ದೇವಿದಾಸ್ ಎಂಬವರ ಮಕ್ಕಳಾದ ನಿಶಾಂತ್ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಮೋಕ್ಷ 5ನೇ ತರಗತಿ ವಿದ್ಯಾರ್ಥಿನಿ.

vtv vitla
- Advertisement -

Related news

error: Content is protected !!