Tuesday, May 21, 2024
spot_imgspot_img
spot_imgspot_img

ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಶೂಟಿಂಗ್ ವೇಳೆ ಬಿದ್ದು ಗಾಯ

- Advertisement -G L Acharya panikkar
- Advertisement -
vtv vitla

ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್, ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ನಟ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದು, ಪಕ್ಕೆಲುಬು ಮುರಿದಿದೆ.

ಅಮಿತಾಭ್ ಬಚ್ಚನ್ ಅವರು ತಮ್ಮ ಆರೋಗ್ಯದ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ಚಿಕಿತ್ಸೆ ಪಡೆದಿದ್ದು , ಸದ್ಯ ಮುಂಬೈ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದಿದ್ದಾರೆ. ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಸಹಜತೆಗೆ ಮರಳು ಕೆಲವು ದಿನಗಳು ಬೇಕಾಗಬಹುದು. ಬಳಿಕ ಶೂಟಿಂಗ್ ಗೆ ಮರಳುತ್ತೇನೆ ಎಂದು ಬಿಗ್ ಬಿ ಹೇಳಿಕೊಂಡಿದ್ದಾರೆ. ನಾಗ್ ಅಶ್ವಿನ್ ಅವರ ನಿರ್ದೇಶನದ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕಾಣಿಸಿಕೊಳ್ಳುತ್ತಿದ್ದಾರೆ.

- Advertisement -

Related news

error: Content is protected !!