- Advertisement -
- Advertisement -
ಸುಳ್ಯ: ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ 4 ದಿನಗಳಿಂದ ನಿಂತಿರುವ ಕಾರು 2 ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿರುವ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಪೆರಾಜೆಯ ಪೆರಂಗಜೆ ಗೌರೀಶ ಎಂಬ ಯುವಕನದೆಂದು ಗೊತ್ತಾಗಿದೆ. 4 ದಿನಗಳ ಹಿಂದೆ ಗುರುವಾರ ದಿನ ಸಂಜೆ ಗೌರೀಶ ಕಾರಲ್ಲಿ ಬಂದು ಸರಕಾರಿ ಆಸ್ಪತ್ರೆಯ ಎದುರಿನ ಜಾಗದಲ್ಲಿ ಕಾರು ಪಾರ್ಕ್ ಮಾಡಿದ್ದು, ವಿಪರೀತ ಕುಡಿತದ ಪರಿಣಾಮವಾಗಿ ಶುಕ್ರವಾರ ದಿನ ಮೃತಪಟ್ಟಿರಬೇಕೆಂದೂ ಶಂಕಿಸಲಾಗಿದೆ.
ಶವ ವಾಸನೆ ಬರತೊಡಗಿದ ಹಿನ್ನಲೆಯಲ್ಲಿ ಆದಿತ್ಯವಾರ ಬೆಳಿಗ್ಗೆ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಯಿತು. ಪೊಲೀಸರಿಗೆ ವಿಷಯ ತಿಳಿದು ಎಸ್ಸೈ ದಿಲೀಪ್ ರವರು, ಸಿಬ್ಬಂದಿಗಳ ಮತ್ತು ಡಿವೈಎಸ್ ಪಿ ಹಿರೇಮಠ ಅವರು ಕೂಡ ಬಂದು ಪರಿಶೀಲಿಸಿದರು. ಪೆರಾಜೆಯ ಪೆರಂಗಜೆ ಲೋಕಯ್ಯ ಗೌಡರ ಮಗ ಗೌರೀಶ ( 30 ) ವಿಪರೀತ ಕುಡಿತದ ಚಟ ಹೊಂದಿದ್ದು, ಆತನ ಪತ್ನಿ ಆಶ್ರಮವೊಂದಕ್ಕೆ ಸೇರಿದ್ದಾರೆನ್ನಲಾಗಿದೆ. ಗೌರೀಶರಿಗೆ ಇಬ್ಬರು ಮಕ್ಕಳಿದ್ದಾರೆ.
- Advertisement -