Sunday, October 1, 2023
spot_imgspot_img
spot_imgspot_img

ಸುಳ್ಯ: ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ; ಸುಳ್ಯ ತಾಲೂಕು ಬಜರಂಗದಳ ಸಂಘಟನೆಯ ವತಿಯಿಂದ ಪ್ರಕರಣ ದಾಖಲಿಸುವಂತೆ ದೂರು- ಆರೋಪಿಯ ವಿರುದ್ಧ ಎಫ್‌ಐಆರ್‌ ದಾಖಲು

- Advertisement -G L Acharya panikkar
vtv vitla
- Advertisement -

ಸುಳ್ಯ: ಭಜನೆಯ ಮತ್ತು ಭಜಕರ ಮನಸ್ಸಿಗೆ ಘಾಸಿ ಮಾಡುವಂತಹ ಅಶ್ಲೀಲ ಬರಹವನ್ನು ಬೇಕಾಬಿಟ್ಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದು ವೈರಲ್ ಮಾಡಿರುವ ಅರಣ್ಯಾಧಿಕಾರಿ ಕಾಣಿಯೂರು ಸಂಜೀವ ಪೂಜಾರಿ ವಿರುದ್ಧ ಸುಳ್ಯ ತಾಲೂಕು ಬಜರಂಗದಳ ಸಂಘಟನೆಯ ವತಿಯಿಂದ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದು , ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ, ಸಚಿನ್ ಪೂವಜೆ, ಬೆಳ್ಳಾರೆ ಬಜರಂಗದಳ ಸಂಯೋಜಕ ಅನಿಲ್ ಪೂಜಾರಿ ಐವರ್ನಾಡು, ರೋಹಿತ್,ಸತೀಶ್ ಪದವು, ಚೇತನ್ ಪ್ರವೀಣ್ ರೈ ಭರತ್ ಬಂಡಾರಿ ಬೆಳ್ಳಾರೆ, ಮತ್ತಿತರರು ಉಪಸ್ಥಿತರಿದ್ದರು.

ಪ್ರಕರಣದ ಸಾರಾಂಶ

ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಭಾರತ ದೇಶ ಮತ್ತು ಹಿಂದೂ ಸಮಾಜದ ಬಗ್ಗೆ ಅತಿ ಕೀಳು ಮಟ್ಟಕ್ಕೆ ಬಂದಿದೆ ಎನ್ನುವ ಕಥೆ ಕಟ್ಟಿ ತನ್ನ ಫೇಸ್ ಬುಕ್ ನಲ್ಲಿ ಸಂದೇಶ ರವಾನೆ ಮಾಡಿದ್ದರೆ.

ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಭಜನೆ ಮತ್ತು ಭಜಕರ ಬಗ್ಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಧರ್ಮನಿಂದನೆ ಮಾಡಿ, ಕೋಮುಗಲಭೆ ಹಬ್ಬಿಸುವಂತೆ ಮುಸ್ಲಿಂ ಮತ್ತು ಕ್ರೈಸ್ತ ಹೆಸರನ್ನ ಉಲ್ಲೇಖಿಸಿ ಹಿಂದೂ ಸಮಾಜದ ಕೋಟ್ಯಾಂತರ ಜನರು ನಂಬಿಕೊಂಡು ಆರಾಧಿಸಿಕೊಂಡು ಬಂದಿರುವ ಆಂಜನೇಯ ದೇವರನ್ನ ಹಿಯಾಳಿಸಿ, ಸಮಾಜದ ಭಿನ್ನ ವರ್ಗಗಳ ಮಧ್ಯ ಗಲಭೆ ಹುಟ್ಟುವಂತೆ ಅಲ್ಲದೆ ಒಂದು ಸಮಾಜದ ನಂಬಿಕೆ ಆಚಾರ ವಿಚಾರಗಳಿಗೆ ನೋವಾಗುವ ರೀತಿಯಲ್ಲಿ ಅವಹೇಳನಕಾರಿ ಸಂದೇಶವನ್ನು ರವಾನಿಸಿದ್ದಾರೆ ಎಂದು ಕಲಂ 505(2),295(A) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!