- Advertisement -
- Advertisement -


ಉಡುಪಿ: ಉಡುಪಿಯಲ್ಲಿ ಹಿಜಾಬ್ ವಿವಾದದ ಹಿನ್ನೆಲೆ ಸ್ಥಳೀಯ ಶಾಸಕ ಶಾಸಕ ರಘುಪತಿ ಭಟ್ ಗೆ ಅವರಿಗೆ ವಿದೇಶಗಳಿಂದ ನಿರಂತರ ಜೀವ ಬೆದರಿಕೆ ಪೋನ್ ಕರೆಗಳು ಬರಲಾರಂಭಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಅವರು ವಿದೇಶಗಳಿಂದ ನಿರಂತರ ಫೋನ್ ಕರೆಗಳು, ಹಾಗೂ ಇಂಟರ್ನೆಟ್ ಕಾಲ್ ಮಾಡಿ ಕಿಡಿಗೇಡಿಗಳು ಭೇದರಿಕೆ ಒಡ್ಡುತ್ತಿದ್ದು, ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ, ಮುಸಲ್ಮಾನರ ವಿರುದ್ಧ ನೀನು ಮೆರೆದಾಡಬೇಡ, ನಿನ್ನನ್ನು ಹೇಗೆ ನಿಯಂತ್ರಿಸಬೇಕು ಗೊತ್ತಿದೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಅಲ್ಲದೆ ಸ್ಥಳೀಯ ಕೆಲ ನಂಬರ್ ಗಳಿಂದ ನಿರಂತರ ಫೋನ್ ಕರೆಗಳು ಬರುತ್ತಿದ್ದು, ಕೊಲೆ ಮಾಡುವುದಾಗಿ ಬೆದರಿಕೆಯನ್ನು ದುಷ್ಕರ್ಮಿಗಳು ಹಾಕುತ್ತಿದ್ದಾರೆ ಈ ಹಿನ್ನಲೆ ಗೃಹಸಚಿವರಿಗೆ ಮೌಖಿಕವಾಗಿ ಮಾಹಿತಿಯನ್ನು ಶಾಸಕ ರಘುಪತಿ ನೀಡಿದ್ದಾರೆ.


- Advertisement -








