Monday, June 29, 2026
spot_imgspot_img
spot_imgspot_img

ಹೆತ್ತಮ್ಮನಿಗೆ ಭಾರವಾದ ಕಂದಮ್ಮ; ಹೆತ್ತು 2 ದಿನದಲ್ಲಿ ರಸ್ತೆಯಲ್ಲಿ ಬಿಟ್ಟು ಹೋದರು..!

- Advertisement -
- Advertisement -

ಬೆಂಗಳೂರು: 2 ದಿನದ ಹೆಣ್ಣು ಮಗುವೊಂದನ್ನು ಕಾಲೇಜು ಮುಂಭಾಗದಲ್ಲಿ ಬಿಟ್ಟು ಹೋಗಿದ್ದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಇದನ್ನೂ ಓದಿ: ಪುತ್ತೂರು: ವ್ಯಕ್ತಿಯೊಬ್ಬರ ಮೇಲೆ 6 ಜನರ ತಂಡದಿಂದ ಹಲ್ಲೆ; 3 ದಿನಗಳ ಹಿಂದಿನ ಮಾತುಕಥೆ, ಜಗಳ, ಸಾಕ್ಷ್ಯ, ಕೊಲೆ ಯತ್ನ…! ಆರೋಪಿಗಳು ಅಂದರ್

ಹೆಣ್ಣು ಮಗು ಎಂಬ ಕಾರಣಕ್ಕೆ ರಸ್ತೆಯಲ್ಲಿ ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೆತ್ತವರ
ಪತ್ತೆಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ನಿನ್ನೆ ರಾತ್ರಿ ಸುಮಾರು 9.30 ಗಂಟೆಗೆ ಕೆಎಲ್ ಇ ಕಾಲೇಜು ಬಳಿ ಹಸುಗೂಸು ಪತ್ತೆಯಾಗಿದ್ದು, ಕಾಲೇಜು
ವಿದ್ಯಾರ್ಥಿಗಳು ಓಡಾಡ್ತಿದ್ದ ಸಮಯದಲ್ಲಿ ಹಸುಗೂಸನ್ನು ಹಳೆ ಬಟ್ಟೆಯಲ್ಲಿ ಸುತ್ತಿ ಬಿಸಾಡಿದ್ದು ಕಂಡುಬಂದಿದೆ.

ಇದನ್ನೂ ಓದಿ: ಈಜಲು ಹೋದ ಯುವಕರು ನಾಪತ್ತೆ; ಇಂದು ಶವವಾಗಿ ಪತ್ತೆ!

ತಕ್ಷಣವೇ ವಿದ್ಯಾರ್ಥಿಗಳು ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮಗುವನ್ನು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

driving
- Advertisement -

Related news

error: Content is protected !!