- Advertisement -
- Advertisement -

ಹೆಬ್ರಿ: ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಗಾರ್ ಗುಡ್ಡೆ ದೇಕಿಬೆಟ್ಟು ಎಂಬಲ್ಲಿ ಅಣ್ಣಯ್ಯ ನಾಯ್ಕ ಎಂಬವರ ಮನೆ ಬುಧವಾರ ತಡರಾತ್ರಿ ವಿದ್ಯುತ್ ಅವಘಡದಿಂದಾಗಿ ಹೊತ್ತಿಕೊಂಡು ಉರಿದು ಅಪಾರ ಹಾನಿ ಸಂಭವಿಸಿದೆ.

ಸುಮಾರು ರಾತ್ರಿ 1.30ರ ಹೊತ್ತಿಗೆ ಅಗ್ನಿ ಅವಘಡ ಸಂಭವಿಸಿದ್ದು ಕೂಡಲೆ ಅಗ್ನಿಶಾಮಕ ಹಾಗೂ ಹೆಬ್ರಿ ಪೊಲೀಸ್ ಠಾಣೆಗೆ ತಿಳಿಸಿ ಬೆಂಕಿ ನಂದಿಸಿದರು.


ಮನೆಗೆ ತಾಗಿದ ಕಟ್ಟಡವಾಗಿದ್ದು ಅಲ್ಲಿ ಮನೆಯ ವಸ್ತುಗಳನ್ನು ಇಡಲು ಉಪಯೋಗಿಸಿ ಮನೆ ಮಂದಿ ಬೇರೆ ಕೋಣೆಯಲ್ಲಿ ಮಲಗಿದ್ದರಿಂದ ಜೀವ ಹಾನಿಯಾಗಿಲ್ಲ. ಮನೆಯ ವಸ್ತುಗಳು, ಹಂಚಿನ ಮಾಡು ಸೇರಿದಂತೆ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಹೋಗಿದ್ದು ಸುಮಾರು 2.5ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


- Advertisement -