Thursday, May 2, 2024
spot_imgspot_img
spot_imgspot_img

ಅಂಕಪಟ್ಟಿ ನೀಡಲು ವಿಳಂಬ ಮಾಡಿದ ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿ ಕೊಂದ ವಿದ್ಯಾರ್ಥಿ!!

- Advertisement -G L Acharya panikkar
- Advertisement -

ಮಾಜಿ ವಿದ್ಯಾರ್ಥಿ ಹಚ್ಚಿದ ಬೆಂಕಿಯಿಂದ ಸುಟ್ಟು, ಬೆಂದು ಹೋಗಿದ್ದ ಮಧ್ಯಪ್ರದೇಶ ಇಂದೋರ್​ನ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮುಕ್ತಾ ಶರ್ಮಾ (54) ಕೊನೆಗೂ ಬದುಕುಳಿಯಲಿಲ್ಲ!!

ನಾಲ್ಕೈದು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವಿಮುಕ್ತಾ ಶರ್ಮಾ ಅವರು ಇಂದು ಮುಂಜಾನೆ 4ಗಂಟೆ ಹೊತ್ತಿಗೆ ನಿಧನರಾಗಿದ್ದಾರೆ ಎಂದು ಅವರ ಸಹೋದರ ಅರವಿಂದ್ ತಿವಾರಿ ತಿಳಿಸಿದ್ದಾರೆ. ಆರೋಪಿ ಮಾಜಿ ವಿದ್ಯಾರ್ಥಿ ಆಶುತೋಶ್​ ಶ್ರೀವಾತ್ಸವ್​ಗೆ ಕೂಡ ಶೇ.20ರಷ್ಟು ಸುಟ್ಟ ಗಾಯಗಳಾಗಿವೆ.

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಇಂದೋರ್​ ಗ್ರಾಮಾಂತರದ ಪೊಲೀಸ್ ಅಧೀಕ್ಷಕ ಭಗವತ್​ ಸಿಂಗ್​ ವಿರ್ಡೆ ‘ಆರೋಪಿ ಆಶುತೋಶ್​ (24) ಏಳನೇ ಸೆಮಿಸ್ಟರ್​ನಲ್ಲಿ ಫೇಲ್ ಆಗಿದ್ದ. ಈತನ ವಿರುದ್ಧ ಹಿಂದೆಯೂ ಎರಡು-ಮೂರು ಬಾರಿ ದೂರು ದಾಖಲಾಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಹಾಗೇ, ಇಂದೋರ್ ಜಿಲ್ಲಾಧಿಕಾರಿ ಇಳಯರಾಜ T. ಅವರ ಆದೇಶದ ಮೇರೆಗೆ ಆಶುತೋಶ್​ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್​ಎಸ್​ಎ)ಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಆ ವ್ಯಕ್ತಿಯ ವಿರುದ್ಧ ಯಾವುದೇ ಆರೋಪ ಹೊರಿಸದೆಯೂ, ಒಂದು ವರ್ಷಗಳ ಕಾಲ ಜೈಲಿನಲ್ಲಿ ಇಡಬಹುದು. ಆತ ದೇಶದ ಭದ್ರತೆಗೆ ಮಾರಕ ಎಂದು ಪರಿಗಣಿಸಲ್ಪಟ್ಟಿರುತ್ತಾನೆ.

ಸೋಮವಾರ ಪ್ರಾಂಶುಪಾಲೆ ವಿಮುಕ್ತಾ ಶರ್ಮಾ ಕಾಲೇಜು ಮುಗಿಸಿ, ಮನೆಯತ್ತ ತೆರಳುತ್ತಿದ್ದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದ ಆಶುತೋಶ್​, ಅವರ ಮೇಲೆ ಪೆಟ್ರೋಲ್​ ಹಾಕಿ ಬೆಂಕಿ ಹಚ್ಚಿದ್ದಾನೆ. ವಿಮುಕ್ತಾ ಶರ್ಮಾ ಅವರ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು. ವಿಮುಕ್ತಾ ಶರ್ಮಾ ಅವರ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು ಬಳಿಕ ಅವನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.

ಆಶುತೋಶ್​ ಶ್ರೀವಾತ್ಸವ್​ ಇದೇ ಬಿಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದ. ಆತ ‘ನಾನು ನನ್ನ ಏಳು ಮತ್ತು ಎಂಟನೇ ಸೆಮಿಸ್ಟರ್​ ಪರೀಕ್ಷೆಯನ್ನು ಮುಗಿಸಿ, 2022ರ ಜುಲೈನಲ್ಲಿಯೇ ರಿಸಲ್ಟ್​ ಕೂಡ ಬಂದಿದೆ ಆದರೆ ಆತ ಪರೀಕ್ಷೆ ಮುಗಿಸಿ ಕಾಲೇಜು ಬಿಟ್ಟು ಹೋದರೂ ಅಂಕಪಟ್ಟಿ ಇನ್ನೂ ಕೈ ಸೇರಿರಲಿಲ್ಲ . ಇದೇ ಕಾರಣಕ್ಕೆ ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದೆ ಎಂದು ಅವನು ಪೊಲೀಸರಿಗೆ ಹೇಳಿಕೆ ನೀಡಿರುತ್ತಾನೆ.

- Advertisement -

Related news

error: Content is protected !!