Friday, May 17, 2024
spot_imgspot_img
spot_imgspot_img

ಕಾಲುವೆಗೆ ಬಿದ್ದು ಇಬ್ಬರು ಯುವಕರು ಸಾವು..!

- Advertisement -G L Acharya panikkar
- Advertisement -

ರಾಯಚೂರು: ಎನ್‌ಆರ್‌ಬಿಸಿ ಕಾಲುವೆಯಲ್ಲಿ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಯುವಕರನ್ನು ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದ ಲಕ್ಕಣ್ಣ (22) ಹಾಗೂ ಬಸವಂತ (25) ಎಂದು ಗುರುತಿಸಲಾಗಿದೆ.

ಊರ ಜಾತ್ರೆ ನಿಮಿತ್ತ ಮನೆಯಲ್ಲಿನ ಬಟ್ಟೆ ಹಾಸಿಗೆ ತೊಳೆಯಲು ಪಾಲಕರೊಂದಿಗೆ ಕಾಲುವೆಗೆ ಹೋದಾಗ ಘಟನೆ ನಡೆದಿದೆ. ಬಟ್ಟೆ ತೊಳೆಯೋ ಮೊದಲು ಓರ್ವ ಯುವಕ ಕಾಲು ಜಾರಿ ನೀರಿಗೆ ಬಿದ್ದಿದ್ದ. ಅವನನ್ನು ಕಾಪಾಡಲು ಮತ್ತೋರ್ವ ಯುವಕ ನೀರಿಗೆ ಧುಮುಕಿದ್ದ. ಆದರೆ ಇಬ್ಬರಿಗೂ ಈಜು ಬಾರದ ಹಿನ್ನೆಲೆ ಕಾಲುವೆಯಲ್ಲಿ ಸಾವನ್ನಪ್ಪಿದ್ದಾರೆ.

ಸ್ಥಳೀಯರು ರಕ್ಷಣೆಗೆ ಪ್ರಯತ್ನ ಪಟ್ಟರೂ ಯಶಸ್ವಿಯಾಗಿಲ್ಲ. ಬಳಿಕ ಯುವಕರ ಶವಗಳನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!